ಸುAಟಿಕೊಪ್ಪ, ಆ. ೧೩: ರಾಜ್ಯ ಸರಕಾರ ಅರುವತ್ತು ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಅನೇಕ ಸಾಮಾಜಿಕ ಭದ್ರತಾ (ಪಿಂಚಣಿ) ಯೋಜನೆಗಳನ್ನು ಜಾರಿಗೆ ತಂದಿದೆ ಇವುಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆಯ ಮೂಲಕ ಮನೆ ಮನೆಗೂ ತೆರಳಿ ಹಿರಿಯ ನಾಗರಿಕರ ಮಾಹಿತಿಗಳನ್ನು ಸಂಗ್ರಹಿಸಿದೆ.

ಆದರೆ ಈ ಸಾಮಾಜಿಕ ಭದ್ರತಾ ಯೋಜನೆಯಿಂದ ಸಾಕಷ್ಟು ಫಲಾನುಭವಿಗಳು ವಂಚಿತರಾಗಿದ್ದು ತಮ್ಮ ನೋವನ್ನು ಪತ್ರಿಕೆಯೊಂದಿಗೆ ಹಂಚಿಕೊAಡಿದ್ದಾರೆ. ಕಂದಾಯ ಇಲಾಖೆಯ ಅಧಿಕಾರಿಗಳು ಒಳ್ಳೆಯ ಉದ್ದೇಶದಿಂದಲೇ ಶ್ರಮ ವಹಿಸಿ ಕುಗ್ರಾಮಗಳಿಗೂ ತೆರಳಿ ತಮ್ಮ ಕರ್ತವ್ಯ ನಿರ್ವಹಿಸಿದ್ದರೂ ಕೂಡ ಕಾರಣಾಂತರಗಳಿAದ ಯೋಜನೆ ಯಶಸ್ವಿಯಾಗಿಲ್ಲ. ಹೆಚ್ಚು ಕಡಿಮೆ ಒಂದೂವರೆ ವರ್ಷದಿಂದ ಫಲಾನುಭವಿಗಳು ಸಂಬAಧಿಸಿದ ಕಚೇರಿಗಳಿಗೆ ಅಲೆಯುವುದು ವಿಚಾರಿಸುವುದು ತಳಮಟ್ಟದ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿಗಿಳಿಯುವುದು ಸರ್ವೆ ಸಾಮಾನ್ಯವಾಗಿದೆ. ಆದರೆ ಕಚೇರಿಗೆ ಬಂದು ಸಾಮಾಜಿಕ ಭದ್ರತಾ ಯೋಜನೆಯಡಿಯಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಿದವರಿಗೆ ಯೋಜನೆಯ ಲಾಭ ಸಿಗುತ್ತಿರುವುದು ಯೋಜನೆ ಲಾಭ ವಂಚಿತ ಹಿರಿಯ ನಾಗರಿಕರಲ್ಲಿ ಬೇಸರ ಮೂಡಿಸಿದೆ.

ಈ ನಡುವೆ ಒಂದೂವರೆ ವರ್ಷದ ಹಿಂದೆ ಮಾಹಿತಿ ನೀಡಿ ಅರ್ಜಿ ಸಲ್ಲಿಸಿರುವ ಹಿರಿಯ ನಾಗರಿಕರಿಗೆ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ಇಲ್ಲದಿರುವುದು ಹಿರಿಯ ನಾಗರಿಕರಲ್ಲಿ ಆತಂಕ ಉಂಟು ಮಾಡಿದೆ.

ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಬಿಜು, ನಂಜೇಗೌಡ ಮಾತನಾಡಿ ಕಳೆದ ಒಂದೂವರೆ ವರ್ಷದ ಹಿಂದೆಯೇ ಮನೆ ಮನೆಗೆ ಬಂದು ಹಿರಿಯ ನಾಗರಿಕರ ಮಾಹಿತಿಯನ್ನು ಕಂದಾಯ ಇಲಾಖೆಯ ಗ್ರಾಮಲೆಕ್ಕಿಗರು ಸಂಗ್ರಹಿಸಿದ್ದಾರೆ. ಇದು ಒಳ್ಳೆಯ ಕೆಲಸ ಆದರೆ ಇಂದಿನವರೆಗೂ ಯಾವುದೇ ಪಿಂಚಣಿ ಬಾರದಿರುವುದು ದುರದೃಷ್ಟಕರ. ಈ ಬಗ್ಗೆ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಗಮನಹರಿಸಿ ಸಮಸ್ಯೆಯನ್ನು ಪರಿಹರಿಸುವಂತೆ ಆಗ್ರಹಿಸಿದ್ದಾರೆ.

ಅರ್ಜಿದಾರರುಗಳಾದ ಕುಂಞಆಹ್ಮದ್, ಚೆನ್ನಮ್ಮ ರಾಜ್ಯ ಸರಕಾರ ಯೋಜನೆಯೆಂದು ಗ್ರಾಮ ಲೆಕ್ಕಿಗರು ಮನೆಗೆ ಆಗಮಿಸಿ ಮಾಹಿತಿ ಸಂಗ್ರಹಿಸಿದ ಸಂದರ್ಭ ನಾವು ಅತೀವ ಸಂತಸಪಟ್ಟೆವು. ಸರಕಾರದ ಯೋಜನೆ ಮನೆ ಬಾಗಿಲಿಗೆ ಬರುವ ಬಗ್ಗೆ ಅಚ್ಚರಿಯಾಗಿತ್ತು. ಆದರೆ ಈಗ ಅದು ಕಾರ್ಯರೂಪಕ್ಕೆ ಬಾರದೆ ನೂತನವಾಗಿ ಅರ್ಜಿಯನ್ನು ಸಲ್ಲಿಸಲು ಆಗದೆ ಅತಂತ್ರ ಸ್ಥಿತಿಯಲ್ಲಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.

ಈ ಬಗ್ಗೆ ಸುಂಟಿಕೊಪ್ಪ ನಾಡಕಚೇರಿಯ ಉಪತಹಶೀಲ್ದಾರ್ ಶಿವಪ್ಪ ಅವರನ್ನು ಸಂಪರ್ಕಿಸಿದಾಗ ನಮ್ಮ ಕಚೇರಿಯಿಂದ ದಾಖಲಾತಿಗಳನ್ನು ಗಣಕ ಯಂತ್ರದ ಮೂಲಕ ಸಂಬAಧಿಸಿದ ಇಲಾಖೆಗೆ ೩೨೬ ಮಂದಿಯ ಅರ್ಜಿಗಳನ್ನು ವಿಲೇವಾರಿಗೊಳಿಸಲಾಗಿದೆ. ತಾಂತ್ರಿಕದೋಷದಿAದಾಗಿ ತಡವಾಗಿರಬಹುದು ಆದೇಶ ಪ್ರತಿಗಳು ಬರಲು ವಿಳಂಬಗೊAಡಿದೆ. ಸಮಸ್ಯೆಯ ಬಗ್ಗೆ ಸಂಬAಧಿಸಿದ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.

- ರಾಜು ರೈ