ಮಡಿಕೇರಿ, ಜ. ೧೨: ಕಾಫಿ ಬೋರ್ಡ್, ಗೋಣಿಕೊಪ್ಪ-ಶ್ರೀಮಂಗಲ ವಲಯದಲ್ಲಿ ಬೃಹತ್ ಮಣ್ಣು ವಿಶ್ಲೇಷಣೆ ಅಭಿಯಾನವನ್ನು ನಡೆಸುತ್ತಿದೆ. ಈ ನಿಟ್ಟಿನಲ್ಲಿ ತಾ. ೧೭ ರಂದು ಬೆಳಿಗ್ಗೆ ೧೦.೩೦ಕ್ಕೆ ಶ್ರೀಮಂಗಲದ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಉದ್ಘಾಟನಾ ಸಮಾರಂಭವನ್ನು ನಡೆಸಲಾಗುವುದು. ಮುಖ್ಯ ಅತಿಥಿಗಳಾಗಿ ಕಾಫಿ ಬೋರ್ಡ್ನ ಸದಸ್ಯರಾದ ಡಾಲಿ ಚಂಗಪ್ಪ ಪಾಲ್ಗೊಳ್ಳುವರು.

ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಎ.ಸಿ. ಜಯಾ ವಹಿಸಲಿದ್ದು, ಗ್ರಾ.ಪಂ. ಸದಸ್ಯರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಶ್ರೀಮಂಗಲ ವಲಯದ ಕಾಫಿ ಬೆಳೆಗಾರರು ಈ ಸಭೆಯಲ್ಲಿ ಭಾಗವಹಿಸಲು ಮಂಡಳಿ ವಿನಂತಿಸಿದೆ.

ಭಾಗವಹಿಸುವ ಕಾಫಿ ಬೆಳೆಗಾರರು ತಮ್ಮ ಕಾಫಿ ತೋಟದ ಮಣ್ಣಿನ ಮಾದರಿಗಳೊಂದಿಗೆ ಪರೀಕ್ಷೆಗೆ ಬರಬಹುದು. ಮಣ್ಣಿನ ರಸಸಾರದ (Soiಟ ಠಿಊ) ವಿಶ್ಲೇಷಣೆ ಮತ್ತು ಅದರ ಫಲಿತಾಂಶವನ್ನು ಅದೇ ದಿನದಲ್ಲಿ ನೀಡಲಾಗುವುದು. ಕಾಫಿ ಬೆಳೆಗಾರರು ಈ ಸದಾವಕಾಶವನ್ನು ಬಳಸಿಕೊಳ್ಳಲು ಕೋರಲಾಗಿದೆ.