ಮಡಿಕೇರಿ, ಜ. ೧೨: ಕೋವಿಡ್-೧೯ ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ೨೦೨೧-೨೨ನೇ ಸಾಲಿನ ಹಣಕಾಸು ವರ್ಷದಲ್ಲಿ ಕೊಡಗು ಜಿಲ್ಲಾ ವ್ಯಾಪ್ತಿಯ ಹೊಟೇಲ್/ ರೆಸಾರ್ಟ್/ ರೆಸ್ಟೋರೆಂಟ್ ಮತ್ತು ಮನರಂಜನಾ ಪಾರ್ಕ್ಗಳ ಉದ್ದಿಮೆದಾರರು, ಟರ‍್ಸ್ ಅಂಡ್ ಟ್ರಾವೆಲ್ಸ್ ಅಪರೇರ‍್ಸ್ಗಳು ಆಸ್ತಿ ತೆರಿಗೆ ಪಾವತಿಯಲ್ಲಿ ಶೇ. ೫೦ ರಷ್ಟು ರಿಯಾಯಿತಿ ಹಾಗೂ ೩ ತಿಂಗಳ ವಿದ್ಯುಚ್ಛಕ್ತಿ ಡಿಮ್ಯಾಂಡ್/ ಫಿಕ್ಸೆಡ್ ಡೆಪಾಸಿಟ್ ಮನ್ನಾ ಸೌಲಭ್ಯವನ್ನು ಸರ್ಕಾರ ಘೋಷಿಸಿದೆ.

ಆದ್ದರಿಂದ ಕೊಡಗು ಜಿಲ್ಲೆಯ ಹೊಟೇಲ್, ರೆಸ್ಟೋರೆಂಟ್, ರೆಸಾರ್ಟ್, ಟರ‍್ಸ್ ಅಂಡ್ ಟ್ರಾವೆಲ್ ಏಜನ್ಸಿ ಹಾಗೂ ಮನರಂಜನಾ ಪಾರ್ಕ್ಗಳ ಉದ್ದಿಮೆದಾರರುಗಳು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ವೆಬ್‌ಸೈಟ್ hಣಣಠಿ://ಞಣಣಜಿ.ಞಚಿಡಿಟಿಚಿಣಚಿಞಚಿಣouಡಿism.oಡಿg/ ಅಥವಾ hಣಣಠಿ://ತಿತಿತಿ.ಞಚಿಡಿಟಿಚಿಣಚಿಞಚಿಣouಡಿism.oಡಿg/ ನಲ್ಲಿ ತಮ್ಮ ಸಂಸ್ಥೆಯನ್ನು ನೋಂದಣಿ ಮಾಡುವಂತೆ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಈಶ್ವರ್ ಕುಮಾರ್ ಖಂಡು ಕೋರಿದ್ದಾರೆ. ಹೆಚ್ಚಿನ ಮಾಹಿತಿಗೆ ಉಪ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಸ್ಟಿವರ್ಟ್ ಹಿಲ್, ಮಡಿಕೇರಿ ಕೊಡಗು ಜಿಲ್ಲಾ ಕಚೇರಿಯ ದೂ. ೦೮೨೭೨-೨೦೦೫೧೯ ಅಥವಾ ೯೪೮೦೦೪೦೦೨೩ ಸಂಪರ್ಕಿಸಬಹುದಾಗಿದೆ.