ಶ್ರೀಮಂಗಲ, ಜ. ೧೩: ರೈತರ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ನಿಗದಿಪಡಿಸಲು ನಿರ್ದೇಶನ ನೀಡಬೇಕೆಂದು ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿ ತಹಶೀಲ್ದಾರ್ ಪ್ರಶಾಂತ್ ಅವರ ಮೂಲಕ ರಾಷ್ಟçಪತಿ ರಮಾನಾಥ್ ಕೋವಿಂದ್ ಅವರಿಗೆ ಭಾರತೀಯ ಕಿಸಾನ್ ಸಂಘದ ಪ್ರಮುಖರು ಮನವಿ ಪತ್ರ ಸಲ್ಲಿಸಿದರು.

ದೇಶವು ಅನೇಕ ಕ್ಷೇತ್ರಗಳಾದ ಕೈಗಾರಿಕೆ, ತಾಂತ್ರಿಕತೆ ಸಂಪರ್ಕ ಸೇರಿದಂತೆ ವಿವಿಧ ರಂಗದಲ್ಲಿ ಗಣನೀಯ ಅಭಿವೃದ್ಧಿ ಕಂಡಿದೆ. ಆದರೆ ಕೃಷಿ ಕ್ಷೇತ್ರ ಮತ್ತು ಅದನ್ನು ಅವಲಂಬಿಸಿರುವ ರೈತ ಕುಟುಂಬ ಅಭಿವೃದ್ಧಿ ಕಂಡಿಲ್ಲ. ೧೯೯೦ರ ದಶಕದಿಂದ ಇದುವರೆಗೆ ದೇಶದಲ್ಲಿ ೩.೫ ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.