ಮಡಿಕೇರಿ, ಜ. ೧೩: ನಗರದ ಇಸಿಹೆಚ್‌ಎಸ್ ಪಾಲಿಕ್ಲಿನಿಕ್‌ನಲ್ಲಿ ತಾ. ೧೪ ಮತ್ತು ೧೫ ರಂದು ಔಷಧಿ ವಿತರಣೆ ಇರುವುದಿಲ್ಲ ಮತ್ತು ೧೫ ರಂದು ದಂತ ವೈದ್ಯರು ಲಭ್ಯವಿರುವುದಿಲ್ಲ. ಕೋವಿಡ್-೧೯ ಹಿನ್ನೆಲೆ ಇಸಿಹೆಚ್‌ಎಸ್‌ಗೆ ಬರುವ ಮೊದಲು ೦೮೨೭೨- ೨೯೮೪೦೬ಗೆ ಕರೆ ಮಾಡಿ ನೋಂದಾಣಿಪಡಿಸಿಕೊAಡು ಬರತಕ್ಕದ್ದು. ಮಾಜಿ ಸೈನಿಕರು ಮತ್ತು ಅವರ ಅವಲಂಭಿತರು ಯಾರಾದರೂ ಕೋವಿಡ್ ಆಗಿ ಆಸ್ಪತ್ರೆಯಲ್ಲಿ ಅಥವಾ ಮನೆಯಲ್ಲಿ ಕ್ವಾರಂಟೈನ್ ಆಗಿದ್ದಲ್ಲಿ ನಮಗೆ ತಿಳಿಸುವಂತೆ ಮನವಿ ಮಾಡಿದೆ.