ಗೋಣಿಕೊಪ್ಪ ವರದಿ, ಜ. ೧೩: ಶ್ರೀ ಬಸವೇಶ್ವರ ಯುವಕ ಸಂಘದ ವತಿಯಿಂದ ಮಾಯಮುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ನಾಮೇರ ನಂದಾ ಬೋಪಯ್ಯ ಸ್ಮರಣಾರ್ಥ ಟೆನ್ನಿಸ್ ಬಾಲ್ ಕ್ರಿಕೆಟ್ ಟ್ರೋಪಿಯನ್ನು ಬ್ಲಾö್ಯಕ್ ಕೋಬ್ರಾಸ್ ತಂಡ ಗೆದ್ದುಕೊಂಡಿದ್ದು, ವಿರಾಟ್ ಕ್ರಿಕೆಟರ್ಸ್ ರನ್ನರ್ ಅಪ್ ಸ್ಥಾನ ಪಡೆದುಕೊಂಡಿತು.

ಕೋಬ್ರಾಸ್ ತಂಡವು ವಿರಾಟ್ ಕ್ರಿಕೆಟರ್ಸ್ ತಂಡವನ್ನು ೧೬ ರನ್‌ಗಳಿಂದ ಮಣಿಸಿ ಕಪ್ ಗೆದ್ದುಕೊಂಡಿತು. ಮೊದಲು ಬ್ಯಾಟ್ ಮಾಡಿ ನಿಗದಿತ ೮ ಓವರ್‌ಗಳಲ್ಲಿ ೬ ವಿಕೆಟ್ ಕಳೆದುಕೊಂಡು ೫೫ ರನ್‌ಗಳ ಗುರಿ ನೀಡಿತು. ವಿರಾಟ್ ಕ್ರಿಕೆಟರ್ಸ್ ೭ ವಿಕೆಟ್ ಕಳೆದುಕೊಂಡು ೩೮ ರನ್‌ಗಳಷ್ಟೆ ಸೇರಿಸಲು ಶಕ್ತವಾಯಿತು. ವಿಜೇತ ತಂಡದ ಆಟಗಾರರ ಉತ್ತಮ ಬೌಲಿಂಗ್ ದಾಳಿಯಿಂದ ಗೆಲುವಿನ ನಗೆಬೀರಲು ಸಾಧ್ಯವಾಯಿತು. ಕೋಬ್ರಾಸ್ ತಂಡದ ಯಾಸಿರ್ ಪಂದ್ಯ ಪುರುಷ, ವಿರಾಟ್ ಕ್ರಿಕೆಟರ್ಸ್ ತಂಡದ ರಿವಿನ್ ಸರಣಿ ಶ್ರೇಷ್ಠ ಬಹುಮಾನ ಪಡೆದುಕೊಂಡರು. ಟೂರ್ನಿಯಲ್ಲಿ ೨೪ ತಂಡಗಳು ಸೆಣೆಸಾಟ ನಡೆಸಿದವು. ಟೂರ್ನಿ ಉಸ್ತುವಾರಿ ಹೆಚ್.ಡಿ. ರಾಕೇಶ್, ದಾನಿಗಳಾದ ನಾಮೇರ ನರೇಶ್, ಕೊಂಗAಡ ನಂಜಪ್ಪ, ಕಾಳಪಂಡ ಪ್ರದೀಪ್, ರ‍್ಯಾಲಿಸ್, ಟಿ. ಮೊಯ್ದು ಇದ್ದರು.