ಮಡಿಕೇರಿ, ಜ. ೧೩: ಸಂಪಾಜೆಯ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ನಿರ್ಮಾಣವಾಗಿರುವ ಅತ್ಯಾಧುನಿಕ ಮಣ್ಣು ಪರೀಕ್ಷಾ ಘಟಕದ ಉದ್ಘಾಟನೆಯನ್ನು ಶಾಸಕ ಕೆ.ಜಿ. ಬೋಪಯ್ಯ ನೆರವೇರಿಸಲಿದ್ದಾರೆ. ತಾ. ೧೪ ರಂದು (ಇಂದು) ಪಯಶ್ವಿನಿ ಸಹಕಾರ ಸದನದಲ್ಲಿ ಕಾರ್ಯಕ್ರಮ ನಡೆಯಲಿದೆ. ಇದರೊಂದಿಗೆ ಸ್ವಾವಲಂಬಿ ಯೋಜನೆಯಡಿಯಲ್ಲಿ ಮೊಟ್ಟೆ, ಕೋಳಿ ಸಾಕಾಣಿಕೆ ಘಟಕಕ್ಕೆ ಸಾಲವನ್ನು ಅರ್ಹ ಫಲಾನುಭವಿಗಳಿಗೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ವಿತರಿಸಲಿದ್ದಾರೆ. ಸಂಘದ ಅಧ್ಯಕ್ಷ ಎನ್.ಸಿ. ಅನಂತ್ ಊರುಬೈಲ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ, ಐಮರ ಸಾವಯವ ಕೃಷಿ ಸಲಹಾ ಸಂಸ್ಥೆಯ ಪ್ರಮುಖ ಮಾದೇಟ್ಟಿರ ತಿಮ್ಮಯ್ಯ ಉಪಸ್ಥಿತರಿರಲಿದ್ದಾರೆ.