*ಸಿದ್ದಾಪುರ, ಜ. ೧೨: ಅಭ್ಯತ್‌ಮಂಗಲ ಪೈಸಾರಿಯ ೧ನೇ ವಾರ್ಡ್ನಲ್ಲಿ ಸುಮಾರು ೮೦ ಮೀಟರ್ ದೂರದ ಕಾಂಕ್ರಿಟ್ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ.
ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಅನುದಾನ ರೂ. ೪ ಲಕ್ಷದಲ್ಲಿ ಶೇಷಪ್ಪ ಅವರ ಮನೆಯಿಂದ ಮಣಿ ಅವರ ಮನೆಯವರೆಗಿನ ರಸ್ತೆ ಕಾಂಕ್ರಿಟೀಕರಣಗೊAಡಿದೆ. ಗುತ್ತಿಗೆದಾರ ಸಂಪತ್ ಕಾಂಕ್ರಿಟ್ ರಸ್ತೆ ನಿರ್ಮಿಸಿದರು. ಜಿ.ಪಂ. ಅಭಿಯಂತರ ಫಯಜ್ ಅಹಮ್ಮದ್ ಅವರು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯ ಗುಣಮಟ್ಟ ಪರಿಶೀಲಿಸಿದರು.