ಕೊಡಗು ಜಿಲ್ಲೆಯಲ್ಲಿ ಕಳೆದ ಒಂದು ವಾರದ ಕೋವಿಡ್ ಪ್ರಕರಣಗಳ ಸರಾಸರಿ ಪಾಸಿಟಿವಿಟಿ ದರ ಶೇ.೧.೧೪ ಆಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ

ಡಾ. ವೆಂಕಟೇಶ್ “ಶಕ್ತಿ”ಗೆ ತಿಳಿಸಿದ್ದಾರೆ.

ಪಾಸಿಟಿವಿಟಿ ದರ ಕೊಡಗಿನಲ್ಲಿ ಅತ್ಯಧಿಕವಾಗಿದೆ ಎಂದು ಕೆಲವರು ಹರಡುತ್ತಿರುವ ವದಂತಿಗಳಿಗೆ ಕಿವಿಗೊಡದಂತೆ ಅವರು ಸೂಚಿಸಿದ್ದಾರೆ. ಸದ್ಯದ ಮಟ್ಟಿಗೆ ಕೋವಿಡ್ ನಿಯಂತ್ರಣದಲ್ಲಿದ್ದು ಆತಂಕ ಪಡುವ ಅಗತ್ಯವಿಲ್ಲ. ಆದರೆ ಜಿಲ್ಲೆಯ ಜನರು ಕೋವಿಡ್‌ನ ನಿಯಮಗಳನ್ನು ಸಮರ್ಪಕವಾಗಿ ಪಾಲಿಸುವಂತೆ ಸಲಹೆಯಿತ್ತಿದ್ದಾರೆ. ಕಳೆದ ತಾ. ೬ ರಿಂದ ತಾ, ೧೨ ರವರೆಗೆ ಒಟ್ಟು ೧೬,೫೦೩ ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ೧೮೮ ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಇದರ ಸರಾಸರಿ ಪಾಸಿಟಿವಿಟಿ ದರ ಶೇ.೧.೧೪ ಆಗುತ್ತದೆ ಎಂದರು.

ಒಂದು ವಾರದ ಕೋವಿಡ್ ಸರಾಸರಿ ಶೇ.೧.೧೪

(ಮೊದಲ ಪುಟದಿಂದ) ಸಾಮಾನ್ಯವಾಗಿ ಪ್ರತಿ ಸೋವiವಾರÀ ಬಿಡುಗಡೆಯಾಗುವ ಕೋವಿಡ್ ಪರೀಕ್ಷಾ ವರದಿಗಳಲ್ಲಿ ಪಾಸಿಟಿವಿಟಿ ದರ ಸ್ವಲ್ಪ ಹೆಚ್ಚಿಗೆ ಇರುತ್ತದೆ. ಏಕೆಂದರೆ, ಭಾನುವಾರಗಳಂದು ನಡೆಸುವ ಪರೀಕ್ಷಾ ಸಂಖ್ಯೆ ಕಡಿಮೆಯಿರುತ್ತದೆ. ಆಗ ಪಾಸಿಟಿವಿಟಿ ಪ್ರಕರಣಗಳ ಸಂಖ್ಯೆ ಪರೀಕ್ಷಾ ಪ್ರಮಾಣಕ್ಕೆ ಸನಿಹವಿರುವದರಿಂದ ಪಾಸಿಟಿವಿಟಿ ದರ ಹೆಚ್ಚಾಗುತ್ತದೆ ಎಂದು ಡಾ. ವೆಂಕಟೇಶ್ ಮಾಹಿತಿಯಿತ್ತರು.