ಮಡಿಕೇರಿ, ಜ. ೧೧: ದಕ್ಷಿಣ ಕೊಡಗಿನಲ್ಲಿ ಈ ವರ್ಷವೂ ಹುಲಿ ಹಾವಳಿಯಿಂದ ಆತಂಕ ಸೃಷ್ಟಿಯಾಗುತ್ತಿದೆ. ಹುದಿಕೇರಿ, ಬೆಳ್ಳೂರು, ತೂಚಮಕೇರಿ ಮತ್ತಿತರ ಕಡೆಗಳಲ್ಲಿ ಈಗಾಗಲೇ ಹಲವು ಜಾನುವಾರುಗಳನ್ನು ಹುಲಿ ಕಬಳಿಸಿದ್ದು, ಹುಲಿ ಸೆರೆಗೆ ಜನತೆಯಿಂದ ಭಾರೀ ಒತ್ತಾಯ ಕೇಳಿ ಬರುತ್ತಿದೆ.
ಇದರ ನಡುವೆ ಇದೀಗ ನಾಂಗಾಲ ಗ್ರಾಮದಲ್ಲೂ ಹುಲಿ ಹೆಜ್ಜೆ ಗೋಚರಿಸಿದ್ದು, ಈ ವಿಭಾಗದ ಜನರು ಆತಂಕಕ್ಕೆ ಒಳಗಾಗುವಂತಾಗಿದೆ. ಅಲ್ಲಿನ ನಿವಾಸಿ ಕುಪ್ಪಂಡ ಬೋಪಣ್ಣ ಅವರ ಕಾಫಿ ತೋಟದಲ್ಲಿ ಹುಲಿ ಹೆಜ್ಜೆ ಕಂಡುಬAದಿದೆ. ಕಳೆದ ರಾತ್ರಿ ಈ ತೋಟದಲ್ಲಿ ವ್ಯಾಘ್ರ ತಿರುಗಾಡಿರುವ ಸುಳಿವು ಲಭಿಸಿದೆ.
ಇಂದು ತೋಟದಲ್ಲಿ ಕೆಲಸಕ್ಕೆ ತೆರಳಿದ್ದ ವೇಳೆ ಹೆಜ್ಜೆ ಗುರುತು ಕಂಡುಬAದಿದೆ. ಇದು ಭಾರೀ ಗಾತ್ರದ ಹುಲಿಯೆಂಬ ಶಂಕೆ ವ್ಯಕ್ತಗೊಂಡಿದೆ. ಹುದಿಕೇರಿ ವ್ಯಾಪ್ತಿಯಲ್ಲಿ ಭೀತಿ ಮೂಡಿಸಿರುವ ಹುಲಿ ಬೇರೆಯದ್ದಾಗಿದ್ದು, ಇದು ನಾಂಗಾಲ ಸನಿಹದ ಅರಣ್ಯ ವ್ಯಾಪ್ತಿಯಿಂದ ಬಂದಿರಬಹುದೆAದು ಶಂಕಿಸಲಾಗಿದೆ. ಈ ಬಗ್ಗೆ ಕುಪ್ಪಂಡ ಬೋಪಣ್ಣ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.