ಶನಿವಾರಸಂತೆ, ಜ. ೧೧: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ೬೦ ವರ್ಷ ಮೇಲ್ಪಟ್ಟ ಹಾಗೂ ೨ನೇ ಡೋಸ್ ಪಡೆದು ೯ ತಿಂಗಳು ಪೂರ್ಣಗೊಂಡವರಿಗೆ, ಫ್ರಂಟ್ ಲೈನ್ ವಾರಿಯರ್ಸ್ಗೆ ಹಾಗೂ ಕೋವಿಡ್-೧೯ ಮುಂಚೂಣಿ ಕಾರ್ಯಕರ್ತರಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವೈದ್ಯರು ಹಾಗೂ ಸಿಬ್ಬಂದಿಗೆ ಕೋವಿಡ್ ಲಸಿಕೆ ಬೂಸ್ಟರ್ ಡೋಸ್ ನೀಡುವ ಕಾರ್ಯಕ್ರಮವನ್ನು ಪ್ರಸೂತಿ ಮತ್ತು ಸ್ತಿçÃರೋಗ ತಜ್ಞೆ ಡಾ. ಜಿ.ಯು. ಶ್ರುತಿ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಶುಶ್ರೂಷಣಾಧಿಕಾರಿಗಳಾದ ಎಚ್.ಕೆ. ವಿಮಲಾ ಹಾಗೂ ರಾಜಪ್ಪ ಅವರಿಗೆ ಪ್ರಥಮ ಲಸಿಕೆ ನೀಡಿ ಚಾಲನೆ ನೀಡಲಾಯಿತು. ಆರೋಗ್ಯ ಕೇಂದ್ರದ ಸ್ತಿçÃರೋಗ ತಜ್ಞೆ ಡಾ. ಜಿ.ಯು. ಶ್ರುತಿ, ಕಚೇರಿ ಅಧೀಕ್ಷಕ ಎಂ.ಎಸ್. ಗಿರೀಶ್, ಪ್ರಯೋಗಶಾಲಾ ತಂತ್ರಜ್ಞ ಸಿ.ಪಿ. ರುದ್ರಪ್ಪ, ಶುಶ್ರೂಷಕಿ ಸ್ವಾತಿ, ಕೇಂದ್ರದ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಜರಿದ್ದರು.