ಮಡಿಕೇರಿ, ಜ. ೧೨: ಪಟ್ಟಿಘಾಟ್ ಮೀಸಲು ಅರಣ್ಯ ವ್ಯಾಪ್ತಿಯ ಭಾಗಮಂಡಲ ವಲಯದ ತೊಡಿಕಾನ ಉಪ ವಲಯದ ತಣ್ಣಿಮಾನಿ ಬಳಿಯ ತಾವೂರು ಗ್ರಾಮದ ನಿಶಾನೆ ಮೊಟ್ಟೆ ಬೆಟ್ಟದ ತಪ್ಪಲಿನಲ್ಲಿ ನಡೆದ ಅಕ್ರಮ ಹರಳು ಕಲ್ಲು ದಂಧೆ ಪ್ರಕರಣಕ್ಕೆ ಸಂಬAಧಿಸಿದAತೆ ಈರ್ವರು ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನು ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ.
ನಿಶಾನೆ ಮೊಟ್ಟೆಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ತಾ. ೨ರಂದು ‘ಶಕಿ’್ತ ಯಲ್ಲಿ ‘ನಿಶಾನೆ ಮೊಟ್ಟೆಯಲ್ಲಿ ಮತ್ತೆ ಹರಳು ಕಲ್ಲು ದಂಧೆ’ ಎಂಬ ತಲೆ ಬರಹದಡಿ ವರದಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಅರಣ್ಯ ಸಂಚಾರಿ ದಳದ ಇಲಾಖಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಗಣಿಗಾರಿಕೆಗಾಗಿ ತೆಗೆದ ಹೊಂಡ ಹಾಗೂ ಸ್ಥಳದಲ್ಲಿದ್ದ ವಸ್ತುಗಳನ್ನು ಪತ್ತೆ ಹಚ್ಚಿ ವಶ ಪಡಿಸಿಕೊಂಡಿದ್ದರು. ರಾಜ್ಯ ಪಶ್ಚಿಮಘಟ್ಟ ಸಂರಕ್ಷಣೆ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ ಅವರು ಕೂಡ ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಉಪ ಸಂರಕ್ಷಣಾಧಿಕಾರಿ ಅಜ್ಜಿಕುಟ್ಟಿರ ಪೂವಯ್ಯ ಅವರು ಭೇಟಿ ನೀಡಿ ಪ್ರಕರಣಕ್ಕೆ ಸಂಬAಧಿಸಿದAತೆ ಸಮಗ್ರ ವರದಿ
(ಮೊದಲ ಪುಟದಿಂದ) ಸಲ್ಲಿಸುವಂತೆ ಅಲ್ಲಿನ ಸಿಬ್ಬಂದಿಗಳಿಗೆ ಸೂಚಿಸಿದ್ದರು. ಬಳಿಕ ಸಿಬ್ಬಂದಿಗಳನ್ನು ವಿಚಾರಣೆಗೊಳಪಡಿಸಿದ್ದರು. ಇದೀಗ ಈ ಸಂಬAಧ ದಂಧೆಕೋರರೊAದಿಗೆ ಶಾಮೀಲಾಗಿ, ಸಹಕರಿಸಿದ ಕಾರಣಕ್ಕಾಗಿ ಈರ್ವರನ್ನು ಅಮಾನತ್ತುಗೊಳಿಸಿದ್ದಾರೆ.
ಮೂರ್ತಿ, ಸಚಿನ್ ಅಮಾನತ್ತು
ಹರಳು ಕಲ್ಲು ದಂಧೆಕೋರರಿಗೆ ಸಹಕರಿಸಿದ ಕಾರಣಕ್ಕಾಗಿ ತೊಡಿಕಾನ ಉಪ ವಲಯದ ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ಹೆಚ್.ಎಸ್. ಮೂರ್ತಿ ಹಾಗೂ ಅರಣ್ಯ ರಕ್ಷಕ ಸಚಿನ್ ಪೋಲಾರ್ ಎಂಬವರುಗಳನ್ನು ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ. ಇನ್ನುಳಿದಂತೆ ರಕ್ಷಕರುಗಳಾದ ಸದಾನಂದ ಎಂಬವರನ್ನು ಸೋಮವಾರಪೇಟೆ ವಲಯಕ್ಕೆ, ಸಿದ್ದೇಶ್ ಎಂಬವರನ್ನು ಸಂಪಾಜೆ ವಲಯಕ್ಕೆ ನಿಯೋಜಿಸಲಾಗಿದೆ. ರವಿ ಹಾಗೂ ಚಿಣ್ಣಪ್ಪ ಎಂಬ ಖಾಯಂ ವೀಕ್ಷಕರುಗಳನ್ನು ಕಕ್ಕಬ್ಬೆ ವಲಯಕ್ಕೆ, ಆರ್ಆರ್ಟಿ ತಂಡದ ಸದಸ್ಯರುಗಳನ್ನು ಬೇರೆ ಬೇರೆ ಕಡೆಗಳಿಗೆ ನಿಯೋಜಿಸುವಂತೆ ಭಾಗಮಂಡಲ ವಲಯ ಅರಣ್ಯಾಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗಿದೆ.
ಹೊಸಬ್ಬರ ನಿಯೋಜನೆ
ನಿಶಾನೆ ಮೊಟ್ಟೆಯಲ್ಲಿದ್ದ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಅಮಾನತ್ತುಗೊಳಿಸಿದ ಬಳಿಕ ಇದೀಗ ಅಲ್ಲಿಗೆ ಅರಣ್ಯ ರಕ್ಷಕರುಗಳಾದ ಶ್ರೀಧರ್ ಹಾಗೂ ರಫೀಕ್ ಎಂಬವರುಗಳನ್ನು ನಿಯೋಜಿಸಲಾಗಿದೆ.
ಸಿಸಿ ಕ್ಯಾಮರಾ ಅಳವಡಿಸಲು ಕ್ರಮ
ಪಶ್ಚಿಮ ಘಟ್ಟ ಸಂರಕ್ಷಣೆ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ ಅವರು ಗಣಿಗಾರಿಕೆ ನಡೆದ ಸ್ಥಳದಲ್ಲಿ ಸಿಸಿ ಕ್ಯಾಮರಾ ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಉಪ ಸಂರಕ್ಷಣಾಧಿಕಾರಿ ಪೂವಯ್ಯ ಅವರು ಸಿಸಿ ಕ್ಯಾಮರಾ ಅಳವಡಿಸಲು ಕ್ರಮ ಕೈಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಸಿಸಿ ಕ್ಯಾಮರಾ ಅಳವಡಿಸಲು ಜಾಗ ಪರಿಶೀಲನೆ ಮಾಡಲಾಗಿದೆ. ಬೆಟ್ಟದ ಮೇಲೆ ವಿದ್ಯುತ್ ಸಂಪರ್ಕ ಇಲ್ಲದಿರುವದರಿಂದ ಹಾಗೂ ಮಂಜು ಕವಿದ ವಾತಾವರಣ ಅಧಿಕವಿರುವದರಿಂದ ಸೋಲಾರ್ ವ್ಯವಸ್ಥೆಯಡಿ ಹೆಚ್ಚಿಗೆ ಸಾಮರ್ಥ್ಯವಿರುವ ಬ್ಯಾಟರಿಯೊಂದಿಗೆ ಕ್ಯಾಮರಾ ಅಳವಡಿಸುವ ಬಗ್ಗೆ ಪರಿಶೀಲಿಸಲಾಗಿದೆ.
? ಸಂತೋಷ್, ಸುನಿಲ್