ಮಡಿಕೇರಿ, ಜ. ೧೨: ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲೆಪಾಡುವಿನಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಹಾಗೂ ಈ ಪ್ರದೇಶದಲ್ಲಿ ಪರಿಶಿಷ್ಟ ವರ್ಗಕ್ಕೆ ರುದ್ರಭೂಮಿಗೆಂದು ಜಾಗ ನೀಡಲು ಇರುವ ಬೇಡಿಕೆಗೆ ಸಂಬAಧಿಸಿದAತೆ ಗಡಿ ಗುರುತಿಸುವ ನಿಟ್ಟಿನಲ್ಲಿ ನಿನ್ನೆ ಸರ್ವೆ ಕಾರ್ಯ ನಡೆಸಲಾಯಿತು. ಮಡಿಕೇರಿ ತಹಶೀಲ್ದಾರ್ ಮಹೇಶ್ ಸೇರಿದಂತೆ ಸಂಬAಧಿಸಿದ ಕಂದಾಯ ಇಲಾಖಾ ಸಿಬ್ಬಂದಿಗಳು, ಕೆ.ಎಸ್.ಸಿ.ಎ.ಗೆ ಸಂಸ್ಥೆಗೆ ಸಂಬAಧಿಸಿದವರು ಹಾಗೂ ಭೂ ವಸತಿ ವಂಚಿತರ ಹೋರಾಟ ಸಮಿತಿಯವರ ಸಮ್ಮುಖದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ನಲ್ಲಿ ಸರ್ವೆ ಕಾರ್ಯ ನಡೆಸಿ ಗಡಿ ಗುರುತಿಸುವ ಮೂಲಕ ಈ ವಿವಾದಕ್ಕೆ ಸಂಬAಧಿಸಿದAತೆ ಮತ್ತೊಂದು ತೆರೆ ಎಳೆಯಲಾಗಿದೆ.
ಅಲ್ಲಿನ ಸರ್ವೆ ನಂಬರ್ ೧೬೭/೧ಎಯಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಜಿಲ್ಲಾಡಳಿತದ ಮೂಲಕ ೧೨.೭೦ ಎಕರೆ ಜಾಗವನ್ನು ಗುತ್ತಿಗೆ ನೀಡಲಾಗಿದ್ದು ಇದಕ್ಕೆ ಕ್ಯಾಬಿನೆಟ್ ಒಪ್ಪಿಗೆಯೂ ಆಗಿದೆ. ಇದೇ ಜಾಗದಲ್ಲಿ ಪರಿಶಿಷ್ಟ ವಿಭಾಗದ ಸ್ಮಶಾನಕ್ಕೆ ಜಾಗ ಬೇಕೆಂಬ ಹಕ್ಕೊತ್ತಾಯದ ಹಿನ್ನೆಲೆಯಲ್ಲಿ ಇಲ್ಲಿ ವಿವಾದ ಮುಂದುವರಿದಿತ್ತು. ಸರಕಾರ ರುದ್ರಭೂಮಿಗೆಂದು ೫೦ ಸೆಂಟ್ ಜಾಗ ಮಂಜೂರು ಮಾಡಿದೆಯಾದರೂ ಒಂದು ಎಕರೆ ಬೇಕೆಂಬ ಬೇಡಿಕೆ ಇದ್ದ ಕಾರಣ ಇದಕ್ಕೆ ಇತ್ತೀಚೆಗೆ ಒಪ್ಪಿಗೆ ಸೂಚಿಸಲಾಗಿತ್ತು. ಇದೀಗ ನಿನ್ನೆ ೧೨.೭೦ ಎಕರೆ ಜಾಗದಲ್ಲಿ ರುದ್ರಭೂಮಿಗೆಂದು ಒಂದು ಎಕರೆ ಜಾಗವನ್ನು ಸರ್ವೆ ಮೂಲಕ ಗಡಿ ಗುರುತಿಸಿ ಅದನ್ನು ಪ್ರತ್ಯೇಕಿಸಲಾಗಿದೆ. ಅಲ್ಲದೆ ಉಳಿದ ೧೧.೭೦ ಎಕರೆ ಜಾಗವನ್ನು ಕ್ರಿಕೆಟ್ ಸಂಸ್ಥೆಗೆ ಪ್ರತ್ಯೇಕಿಸಿ ನೀಡುವ ಮೂಲಕ ಮತ್ತೊಂದು ಪ್ರಯತ್ನ ಯಶಸ್ವಿಯಾಗಿ ನಡೆದಿದೆ.
(ಮೊದಲ ಪುಟದಿಂದ) ಸರ್ವೆ ಕಾರ್ಯದ ಬಳಿಕ ಎರಡು ಜಾಗವನ್ನು ಪ್ರತ್ಯೇಕಿಸಲಾಗಿದೆ. ಕ್ರಿಕೆಟ್ ಸಂಸ್ಥೆಯವರು ಗಡಿ ಗುರುತಿಸಲಾದ ಜಾಗದಲ್ಲಿ ಸಣ್ಣ ಕಂದಕವನ್ನು ನಿರ್ಮಿಸುವ ಮೂಲಕ ತಮಗೆ ಗಡಿ ಗುರುತಿಸಲ್ಪಟ್ಟ ಜಾಗವನ್ನು ಸುಪರ್ದಿಗೆ ತೆಗೆದುಕೊಂಡರು. ರುದ್ರಭೂಮಿ ಜಾಗವನ್ನೂ ಸಂಬAಧಿಸಿದ ಹೋರಾಟಗಾರರಿಗೆ ಗುರುತಿಸಿಕೊಡಲಾಗಿದೆ. ಇದಲ್ಲದೆ ಈ ಹೋರಾಟಗಾರರಿಂದ ಇನ್ನು ಒಂದು ಎಕರೆ ಜಾಗ ಬೇಕೆಂಬ ಬೇಡಿಕೆ ಇದ್ದು ಇದಕ್ಕೆ ಪ್ರತ್ಯೇಕ ಸರ್ವೆಯನ್ನು ಮುಂದಿನ ದಿನದಲ್ಲಿ ನಡೆಸಲಾಗುವುದು ಎಂದು ತಹಶೀಲ್ದಾರ್ ಮಹೇಶ್ ಅವರು ‘ಶಕ್ತಿ’ಗೆ ತಿಳಿಸಿದ್ದಾರೆ. ಆದರೆ ಪ್ರಸ್ತುತ ೧೨.೭೦ ಎಕರೆಯ ವಿಸ್ತೀರ್ಣದಲ್ಲಿ ೧೧.೭೦ ಎಕರೆ ಜಾಗವನ್ನು ಕ್ರಿಕೆಟ್ ಸಂಸ್ಥೆಗೂ, ೧ ಎಕರೆ ಜಾಗವನ್ನು ರುದ್ರಭೂಮಿಗೆಂದೂ ಗುರುತಿಸಿಕೊಡಲಾಗಿದ್ದು, ಪ್ರಕರಣವನ್ನು ಇತ್ಯರ್ಥಪಡಿಸಲಾಗಿದೆ. ಮುಂದೆ ಅದರ ಪಕ್ಕದ ಜಾಗದ ಸರ್ವೆ ನಡೆಸಿ ಮುಂದಿನ ಕ್ರಮ ಅನುಸರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸ್ಥಳದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್
ಸರ್ವೆ ಕಾರ್ಯದ ಸಂದರ್ಭ ಸ್ಥಳದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. (ಮೊದಲ ಪುಟದಿಂದ) ಸರ್ವೆ ಕಾರ್ಯದ ಬಳಿಕ ಎರಡು ಜಾಗವನ್ನು ಪ್ರತ್ಯೇಕಿಸಲಾಗಿದೆ. ಕ್ರಿಕೆಟ್ ಸಂಸ್ಥೆಯವರು ಗಡಿ ಗುರುತಿಸಲಾದ ಜಾಗದಲ್ಲಿ ಸಣ್ಣ ಕಂದಕವನ್ನು ನಿರ್ಮಿಸುವ ಮೂಲಕ ತಮಗೆ ಗಡಿ ಗುರುತಿಸಲ್ಪಟ್ಟ ಜಾಗವನ್ನು ಸುಪರ್ದಿಗೆ ತೆಗೆದುಕೊಂಡರು. ರುದ್ರಭೂಮಿ ಜಾಗವನ್ನೂ ಸಂಬAಧಿಸಿದ ಹೋರಾಟಗಾರರಿಗೆ ಗುರುತಿಸಿಕೊಡಲಾಗಿದೆ. ಇದಲ್ಲದೆ ಈ ಹೋರಾಟಗಾರರಿಂದ ಇನ್ನು ಒಂದು ಎಕರೆ ಜಾಗ ಬೇಕೆಂಬ ಬೇಡಿಕೆ ಇದ್ದು ಇದಕ್ಕೆ ಪ್ರತ್ಯೇಕ ಸರ್ವೆಯನ್ನು ಮುಂದಿನ ದಿನದಲ್ಲಿ ನಡೆಸಲಾಗುವುದು ಎಂದು ತಹಶೀಲ್ದಾರ್ ಮಹೇಶ್ ಅವರು ‘ಶಕ್ತಿ’ಗೆ ತಿಳಿಸಿದ್ದಾರೆ. ಆದರೆ ಪ್ರಸ್ತುತ ೧೨.೭೦ ಎಕರೆಯ ವಿಸ್ತೀರ್ಣದಲ್ಲಿ ೧೧.೭೦ ಎಕರೆ ಜಾಗವನ್ನು ಕ್ರಿಕೆಟ್ ಸಂಸ್ಥೆಗೂ, ೧ ಎಕರೆ ಜಾಗವನ್ನು ರುದ್ರಭೂಮಿಗೆಂದೂ ಗುರುತಿಸಿಕೊಡಲಾಗಿದ್ದು, ಪ್ರಕರಣವನ್ನು ಇತ್ಯರ್ಥಪಡಿಸಲಾಗಿದೆ. ಮುಂದೆ ಅದರ ಪಕ್ಕದ ಜಾಗದ ಸರ್ವೆ ನಡೆಸಿ ಮುಂದಿನ ಕ್ರಮ ಅನುಸರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸ್ಥಳದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್
ಸರ್ವೆ ಕಾರ್ಯದ ಸಂದರ್ಭ ಸ್ಥಳದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಮೊದಲು ಜಾಗವನ್ನು ಗುರುತಿಸಿಕೊಟ್ಟು ನಂತರ ಕೆಲಸ ಪ್ರಾರಂಭಿಸಿ ಎಂದು ಹೋರಾಟ ಸಮಿತಿಯ ಹೆಚ್. ಮೊಣ್ಣಪ್ಪ, ನಿರ್ವಾಣಪ್ಪ ಸೇರಿದಂತೆ ಅಲ್ಲಿನ ನಿವಾಸಿಗಳು ಆರಂಭದಲ್ಲಿ ಒತ್ತಾಯಿಸಿದರು.
ಈ ಸಂದರ್ಭ ಹೆಚ್ಚಿನ ಸಂಖ್ಯೆಯಲ್ಲಿ ಹೋರಾಟಗಾರರೂ ಜಮಾಯಿಸಿದ್ದರು. ಮೊಣ್ಣಪ್ಪ ಹಾಗೂ ನಿರ್ವಾಣಪ್ಪ ಮಾತನಾಡಿ ಸರಕಾರದ ನಿರ್ಧಾರಕ್ಕೆ ನಮ್ಮ ಒಪ್ಪಿಗೆ ಇದೆ. ಆದರೆ ಜಾಗ ಗುರುತಿಸುವವರೆಗೆ ಕ್ರೀಡಾಂಗಣದಲ್ಲಿ ಕೆಲಸ ಪ್ರಾರಂಭಿಸಬಾರದೆAದು ಆಗ್ರಹಿಸಿದರು.
ಈ ಸಂದರ್ಭ ಪ್ರತಿಕ್ರಿಯಿಸಿದ ತಹಶೀಲ್ದಾರರು ೧೫ ದಿನದಲ್ಲಿ ಇತರ ಒಂದು ಎಕರೆಯನ್ನು ಈ ವ್ಯಾಪ್ತಿಯಲ್ಲಿ ಸರ್ವೆ ಮೂಲಕ ಗುರುತಿಸಿ ಕೊಡಲಾಗುವುದು ಎಂದರು. ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷೆ ಕುಸುಮಾವತಿ ಅವರು ಸ್ಥಳದಲ್ಲಿದ್ದು, ಸ್ಮಶಾನ ಜಾಗ ಗುರುತಿಸುವಲ್ಲಿ ವಿಳಂಬವಾಗಿದೆ ಎಂದು ಆಕ್ಷೇಪಿಸಿದರು. ಗ್ರಾ.ಪಂ. ಸದಸ್ಯ ಎಂ.ಡಿ. ಹಮೀದ್, ಲಕ್ಷಿö್ಮ ಮತ್ತಿತರರು ಈ ಸಂದರ್ಭ ಪಾಲ್ಗೊಂಡಿದ್ದರು. ಕ್ರಿಕೆಟ್ ಸಂಸ್ಥೆಯ ಪರವಾಗಿ ಕೆ.ಎಸ್.ಸಿ.ಎ. ಸಂಯೋಜಕ ಚೇನಂಡ ಪೃಥ್ವಿ ದೇವಯ್ಯ, ಸಂಸ್ಥೆಯ ಕಾರ್ಯನಿರ್ವಾಹಕ ಸದಸ್ಯ ಶಾಂತಿಸ್ವರೂಪ್ ಹಾಜರಿದ್ದರು.