ಸೋಮವಾರಪೇಟೆ, ಜ.೧೧ : ಒಂಟಿಯಾಗಿ ಜೀವನ ನಡೆಸುತ್ತಿರುವ ಹಿರಿಯ ನಾಗರಿಕರಿಗೆ ರಾಷ್ಟಿçÃಯ ಹಿರಿಯ ನಾಗರಿಕರ ಸಹಾಯವಾಣಿ ೧೪೫೬೭ ಸಹಾಯ ಮಾಡುತ್ತದೆ ಎಂದು ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್ ವ್ಯವಸ್ಥಾಪಕ ನಿರ್ದೇಶಕಿ ರಾಧಾ ಮೂರ್ತಿ ತಿಳಿಸಿದ್ದಾರೆ.
ಮೂರನೇ ಅಲೆಯಲ್ಲಿ ಕೋವಿಡ್ ಪ್ರಕರಣಗಳು ತ್ವರಿತ ಗತಿಯಲ್ಲಿ ಉಲ್ಬಣಗೊಳ್ಳುತ್ತಿದ್ದು, ಇದು ಹಿರಿಯ ನಾಗರಿಕರ ಆರೋಗ್ಯ ಮತ್ತು ಆರೈಕೆ ಯಲ್ಲಿ ಪರಿಣಾಮ ಬೀರಬಹುದು ಎನ್ನುವ ಆತಂಕದಿAದಾಗಿ ರಾಷ್ಟಿçÃಯ ಹಿರಿಯ ನಾಗರಿಕರ ಸಹಾಯವಾಣಿ ಕರ್ನಾಟಕ ಘಟಕವು ವಿಶೇಷ ಸಹಾಯ ಕೇಂದ್ರವನ್ನು ಸ್ಥಾಪಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ತಜ್ಞರ ಪ್ರಕಾರ ಕೋವಿಡ್ ಲಸಿಕೆ ಪಡೆದುಕೊಂಡ ನಂತರವೂ ಮೂರನೇ ಅಲೆಯಲ್ಲಿ ಹೆಚ್ಚಿನ ಹಿರಿಯ ನಾಗರಿಕರಿಗೆ ಕೊರೋನಾ ವೈರಸ್ ಬಂದಿದ್ದು ಅವರಿಗೆ ಹೆಚ್ಚಿನ ಆರೈಕೆ ನೀಡುವುದು ಅಗತ್ಯ. ಕೆಲವೊಮ್ಮೆ ನಿಷೇಧಾಜ್ಞೆ ಜಾರಿಯಾಗುವುದರಿಂದ ಹಿರಿಯ ನಾಗರಿಕರಲ್ಲಿ ಪ್ರತ್ಯೇಕ ವಾಸ ಆತಂಕ, ಭಯ, ಭಾವನಾತ್ಮಕ ಖಿನ್ನತೆ ಹೆಚ್ಚಾಗಬಹುದು.
ಕೊರೋನ ವೈರಸ್ ಮಹಾಮಾರಿಯಿಂದ ಒಂಟಿತನ, ಭಾವನಾತ್ಮಕ ಖಿನ್ನತೆ ಒಳಪಟ್ಟಿರುವ ಕರ್ನಾಟಕದ ಹಿರಿಯ ನಾಗರಿಕರು ಅದೂ ಅಲ್ಲದೇ ನಿಂದನೆಗೊಳಪಟ್ಟವರು, ರಕ್ಷಣೆಯ ಅಗತ್ಯವಿರುವವರು, ಪಿಂಚಣಿ ಮತ್ತು ಕಾನೂನು ಸೇವೆಗಳ ಬಗ್ಗೆ ಮಾಹಿತಿ ಬೇಕಾದವರು ಟೋಲ್ ಫ್ರೀ ಸಂಖ್ಯೆ ೧೪೫೬೭ ಗೆ ಕರೆ ಮಾಡಬಹುದು. ಸಂಸ್ಥೆಯ ಸಲಹೆಗಾರರು ಮತ್ತು ಸಾಮಾಜಿಕ ಕಾರ್ಯಕರ್ತರು ಸಲಹೆ ಸೂಚನೆ ಮಾರ್ಗದರ್ಶನ ಮತ್ತು ಬೆಂಬಲ ನೀಡುತ್ತಾರೆ. ಈ ಎಲ್ಲಾ ಸೇವೆಗಳು ಉಚಿತವಾಗಿವೆ.
ಇದು ರಾಜ್ಯ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳ ಸಹಯೋಗದೊಂದಿಗೆ ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಜಾರಿಗೆ ತಂದಿರುವ ನೂತನ ಯೋಜನೆಯಾಗಿದ್ದು, ಕರ್ನಾಟಕ ಘಟಕವು ಸಂಕಷ್ಟದಲ್ಲಿರುವ ಸುಮಾರು ೧೫,೬೬೯ ಹಿರಿಯ ನಾಗರಿಕರಿಗೆ ಈಗಾಗಲೇ ಸಹಾಯ ಮಾಡಿದೆ ಎಂದು ರಾಧಾ ಮೂರ್ತಿ ತಿಳಿಸಿದ್ದಾರೆ.