ಅಮ್ಮತ್ತಿ, ಜ. ೧೧: ಅಮ್ಮತ್ತಿ ಪ್ರೌಢಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಕರ್ನಲ್ ಕೆ.ಸಿ. ಸುಬ್ಬಯ್ಯ ಅವರ ಅಧ್ಯಕ್ಷತೆಯಲ್ಲಿ ನಿವೃತ್ತ ಮುಖ್ಯ ಶಿಕ್ಷಕರುಗಳಾದ ಟಿ. ಸದಾನಂದ ಮತ್ತು ಎಂ.ಟಿ. ಗೀತ ಇವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಶಾಲಾ ಭಗವತಿ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು. ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಕರ್ನಲ್ ಕೆ.ಸಿ. ಸುಬ್ಬಯ್ಯ ಅವರು ನಿವೃತ್ತ ಮುಖ್ಯ ಶಿಕ್ಷಕರುಗಳ ಸೇವೆಯನ್ನು ಸ್ಮರಿಸಿದರು. ಸಹ ಶಿಕ್ಷಕರುಗಳಾದ ಟೀನಾ ಬಿ.ಎಸ್. ಮತ್ತು ನೂತನ ಪ್ರಾರ್ಥಿಸಿ, ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಕುಟ್ಟಂಡ ವಿನೂ ಪೂವಯ್ಯ ಸ್ವಾಗತಿಸಿದರು. ನಿರ್ದೇಶಕ ಕೇಚಂಡ ಕುಶಾಲಪ್ಪ ವಂದಿಸಿದರು. ಸಹ ಶಿಕ್ಷಕ ಬಿ.ಪಿ. ರಾಜೇಗೌಡ ಕಾರ್ಯಕ್ರಮ ನಿರೂಪಿಸಿದರು.
ಶಾಲಾ ಆಡಳಿತ ಮಂಡಳಿಯ ವ್ಯವಸ್ಥಾಪಕ ಕಾವಾಡಿಚಂಡ ಯು. ಗಣಪತಿ, ಖಜಾಂಚಿ ವಾಟೇರೀರ ಎ. ಸುಬ್ರಮಣಿ, ನಿರ್ದೇಶಕರಾದ ಕೇಳಪಂಡ ಕುಶಾಲಪ್ಪ, ಬೋಜಿ ಸುಬ್ಬಯ್ಯ, ಮುಖ್ಯ ಶಿಕ್ಷಕ ದೊಡ್ಡತಮ್ಮಯ್ಯ, ಸಹ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು, ಶಾಲೆಯ ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.