ಗೋಣಿಕೊಪ್ಪ ವರದಿ, ಜ. ೧೦ : ಹುಲಿ ದಾಳಿ ಪ್ರಕರಣವನ್ನು ಲಘುವಾಗಿ ಪರಿಗಣಿಸದೆ ಜನರ ಸಮಸ್ಯೆಗೆ ಸ್ಪಂದಿಸಬೇಕು ಎಂದು ವೀರಾಜಪೇಟೆ ತಾಲೂಕು ಬಿಜೆಪಿ ಕೃಷಿ ಮೋರ್ಚ ಒತ್ತಾಯಿಸಿತು.
ಪೊನ್ನಂಪೇಟೆ ತಾಲೂಕು ತೂಚಮಕೇರಿ ಗ್ರಾಮದಲ್ಲಿ ನಡೆದ ಹುಲಿ ದಾಳಿ ಪ್ರಕರಣ ಸ್ಥಳಕ್ಕೆ ಭೇಟಿ ನೀಡಿದ ಮೋರ್ಚದ ಪದಾಧಿಕಾರಿಗಳು ಗ್ರಾಮಸ್ಥರು ಹೋರಾಟಕ್ಕೆ ಇಳಿಯುವ ಮುನ್ನ ಹುಲಿ ಹಿಡಿಯಲು ಅರಣ್ಯ ಅಧಿಕಾರಿಗಳು ಮುತುವರ್ಜಿ ವಹಿಸಬೇಕು. ಇಲ್ಲದಿದ್ದಲ್ಲಿ ಸ್ಥಳೀಯರ ಸಹಕಾರದಲ್ಲಿ ಪ್ರತಿಭಟಿಸುವ ಎಚ್ಚರಿಕೆ ನೀಡಿದರು. ವೀರಾಜಪೇಟೆ ಡಿಸಿಎಫ್ ಚಕ್ರಪಾಣಿಗೆ ಫೋನ್ ಕರೆ ಮಾಡಿ ತಕ್ಷಣ ಪರಿಹಾರ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಕೃಷಿ ಮೋರ್ಚ ತಾಲೂಕು ಅಧ್ಯಕ್ಷ ಕಟ್ಚೇರ ಈಶ್ವರ ತಿಮ್ಮಯ್ಯ, ಪ್ರ. ಕಾರ್ಯದರ್ಶಿ ತೋರೀರ ವಿನು, ಕಾರ್ಯದರ್ಶಿ ಕೊಟ್ಟಂಗಡ ಅಯ್ಯಪ್ಪ, ಅಡ್ಡಂಡ ಮಂದಣ್ಣ, ಪದಾಧಿಕಾರಿಗಳಾದ ಪೆಮ್ಮಂಡ ಭರತ್, ಚೋಡುಮಾಡ ದಿನೇಶ್, ಪೆಮ್ಮಂಡ ಗಿರೀಶ್, ಚಟ್ಟಂಗಡ ಮಹೇಶ್ ಇದ್ದರು.