ಮಡಿಕೇರಿ, ಜ. ೧೦: ಜಿಲ್ಲೆಯಲ್ಲಿ ಕೈಗಾರಿಕಾಭಿವೃದ್ಧಿ ಪ್ರೋತ್ಸಾಹಿಸಲು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರ ಅಧ್ಯಕ್ಷತೆಯಲ್ಲಿ ಒಂದು ದಿನದ ಉದ್ಯಮಿಯಾಗು, ಉದ್ಯೋಗ ನೀಡು ಹಾಗೂ ಕೈಗಾರಿಕಾ ಅದಾಲತ್ ಕಾರ್ಯಾಗಾರ ತಾ. ೧೮ ರಂದು ಬೆಳಿಗ್ಗೆ ೯.೩೦ ರಿಂದ ಮಧ್ಯಾಹ್ನ ೩.೩೦ ಗಂಟೆವರೆಗೆ ಜಿಲ್ಲೆಯಲ್ಲಿ ಆಯೋಜಿಸಿದ್ದಾರೆ. ಈ ಕಾರ್ಯಕ್ರಮವು ಮೈಸೂರು ವಿಭಾಗದಿಂದ ವೀಡಿಯೋ ಕಾನ್ಫರೆನ್ಸ್ ಸ್ಕಿçÃನ್‌ಗಳ ಮೂಲಕ ನಡೆಯಲಿದ್ದು, ಉದ್ಯಮಿಯಾಗು ಉದ್ಯೋಗ ನೀಡು ಕಾರ್ಯಾಗಾರದಲ್ಲಿ ಆಸಕ್ತಿಯಿರುವ ತಾಂತ್ರಿಕ/ ಬಿಸಿನೆಸ್ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳು ಹಾಗೂ ಇತರೆ ಉದ್ಯಮಶೀಲರ ನೋಂದಣಿಗಾಗಿ hಣಣಠಿ://ebiz.ಞಚಿಡಿಟಿಚಿಣಚಿಞಚಿ.gov.iಟಿ /eಃiz ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು/ ಉದ್ಯಮಶೀಲರು ನೋಂದಣಿ ಮಾಡಿಕೊಳ್ಳಲು ಕೋರಿದೆ.

ನಂತರ ಅದೇ ದಿನ ಮಧ್ಯಾಹ್ನ ೩.೩೦ ಗಂಟೆಯಿAದ ಜರುಗುವ ಕೈಗಾರಿಕಾ ಅದಾಲತ್ ಕಾರ್ಯಕ್ರಮಕ್ಕೆ ಸಂಬAಧಿಸಿದ ಕೈಗಾರಿಕೋದ್ಯಮಿ ಗಳು, ಕೈಗಾರಿಕಾ ಸಂಘ ಸಂಸ್ಥೆಗಳು ಮತ್ತು ಜನಪ್ರತಿನಿಧಿಗಳು ಭಾಗವಹಿಸುವಂತೆ ಕೋರಿದೆ. ಅದಾಲತ್‌ನಲ್ಲಿ ಭಾಗವಹಿಸುವವರು ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸುವಂತೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಶಂಕರ ನಾರಾಯಣ ಅವರು ತಿಳಿಸಿದ್ದಾರೆ.