ಕುಶಾಲನಗರ, ಜ. ೧೦ ಪ್ರಜೆಗಳು ಜಾತಿ, ಹಣದ ಹಿಂದೆ ಬೀಳದೆ ಪ್ರಾಮಾಣಿಕತೆಗೆ ಬೆಲೆ ನೀಡುವಂತಾಗ ಬೇಕು, ಪ್ರಜಾಪ್ರಭುತ್ವದಲ್ಲಿ ಹೆಚ್ಚಿನ ಬದಲಾವಣೆಯ ಅಗತ್ಯವಿದೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅವರು ಮಡಿಕೇರಿಗೆ ತೆರಳುವ ಸಂದರ್ಭ ಮಾರ್ಗಮಧ್ಯೆ ಕುಶಾಲನಗರ ಕೊಪ್ಪ ಗಡಿಭಾಗದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ವ್ಯಕ್ತಪಡಿಸಿ ಮಾತನಾಡಿದರು.

ಮೇಲ್ಮನೆ ಅತ್ಯಂತ ಗೌರವಾನ್ವಿತ ಸಂಸ್ಥೆಯಾಗಿದ್ದು, ಶ್ರೀಸಾಮಾನ್ಯರ ಚಿಂತಕರ ಚಾವಡಿಯಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕಲಾವಿದರು, ಸಾಹಿತಿಗಳು, ಆಸಕ್ತರು ಬರಬೇಕು. ಪ್ರಜೆಗಳು ಬುದ್ಧಿವಂತರಾಗಬೇಕು. ಪ್ರತಿನಿಧಿಗಳ ಆಯ್ಕೆ ಸಂದರ್ಭ ಪ್ರಾಮಾಣಿಕತೆಗೆ ಬೆಲೆ ನೀಡುವಂತಾಗ ಬೇಕು ಎಂದರು.

ಕುಶಾಲನಗರ ಕೊಪ್ಪ ಗಡಿಭಾಗದಲ್ಲಿ ಸಭಾಪತಿಗಳನ್ನು ಕುಶಾಲನಗರ ಪ.ಪಂ. ಮತ್ತು ಕೊಪ್ಪ ಗ್ರಾ.ಪಂ. ಆಡಳಿತ ಮಂಡಳಿ ಸಂಘಸAಸ್ಥೆಗಳ ಪ್ರಮುಖರು ಮತ್ತು ಅಧಿಕಾರಿಗಳು ಬರಮಾಡಿಕೊಂಡರು.

ಈ ಸಂದರ್ಭ ಕುಶಾಲನಗರ ಪ.ಪಂ. ಅಧ್ಯಕ್ಷ ಜೈವರ್ಧನ್, ಉಪಾಧ್ಯಕ್ಷೆ ಸುರೈಯಾಭಾನು, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ರೇಣುಕಾ ಸ್ವಾಮಿ, ಉಪಾಧ್ಯಕ್ಷೆ ಸಿಂಧು, ಸೇರಿದಂತೆ ಪಂಚಾಯಿತಿ ಜನಪ್ರತಿನಿಧಿಗಳು ಬರಮಾಡಿಕೊಂಡರು. ಇದೇ ಸಂದರ್ಭ ಜಿಲ್ಲಾಡಳಿತದ ಪರವಾಗಿ ಮಡಿಕೇರಿ ತಾಲೂಕು ತಹಶೀಲ್ದಾರ್ ಮಹೇಶ್ ಅವರು ಹೂಗುಚ್ಚ ನೀಡುವ ಮೂಲಕ ಸಭಾಪತಿಗಳನ್ನು ಸ್ವಾಗತಿಸಿದರು. ಕುಶಾಲನಗರ ಸಾಹಿತ್ಯಾಸಕ್ತರ ಬಳಗದ ಸಂಚಾಲಕ ಕೆ.ಎಸ್. ಮೂರ್ತಿ, ಕುಮಾರ್, ಚಂದ್ರು ಮತ್ತಿತರರಿದ್ದರು.