ಸುಂಟಿಕೊಪ್ಪ, ಜ. ೧೦: ವಾರಾಂತ್ಯ ಕರ್ಪ್ಯೂ ಹಿನ್ನೆಲೆಯಲ್ಲಿ ಸುಂಟಿಕೊಪ್ಪ ಸಂತೆ ವಹಿವಾಟು ಭಾನುವಾರ ರದ್ದಾಗಿದ್ದು, ಸೋಮವಾರ ಮಾರುಕಟ್ಟೆಯಲ್ಲಿ ದಿನಸಿ, ತರಕಾರಿ, ಬಟ್ಟೆ ಹಾಗೂ ತಿಂಡಿ ತಿನಿಸು ವ್ಯಾಪಾರ ನಡೆಯಿತು.
ಕಾಫಿ ಕುಯ್ಲುವಿನಿಂದ ಹೆಚ್ಚಿನ ಕಾರ್ಮಿಕರು ಸಂತೆ ವ್ಯಾಪಾರದತ್ತ ಮುಖ ಮಾಡಲಿಲ್ಲ. ಸ್ಥಳೀಯ ಗ್ರಾಮಸ್ಥರು ಆಸುಪಾಸಿನ ಗ್ರಾಮಸ್ಥರು ಸಂತೆಗೆ ಬಂದು ನಿತ್ಯೋಪಯೋಗಿ ವಸ್ತುಗಳನ್ನು ಖರೀದಿಸಿದರು.
ಮದ್ಯದಂಗಡಿ ೨ ದಿನದ ಬಿಡುವಿನ ನಂತರ ತೆರೆದಿದ್ದು, ಮದ್ಯದಂಗಡಿಗಳಲ್ಲಿ ಗ್ರಾಹಕರು ಅಧಿಕ ಸಂಖ್ಯೆಯಲ್ಲಿದ್ದರು. ಕೋಳಿ, ಹಸಿಮೀನು, ಕುರಿ ಮಾಂಸದ ವ್ಯಾಪಾರ ಬಿರುಸಿನಿಂದ ನಡೆಯಿತು.
ಸುಂಟಿಕೊಪ್ಪ ಆಸುಪಾಸಿನ ತೋಟದ ಕಾರ್ಮಿಕರಿಗೆ ಸೋಮವಾರ ಸಂತೆ ಇರುವ ಬಗ್ಗೆ ಮಾಹಿತಿ ಇಲ್ಲದೆ ಇರುವುದರಿಂದ ಗ್ರಾಹಕರ ಸಂಖ್ಯೆ ಕಡಿಮೆಯಾಗಿತ್ತು.