ಮಡಿಕೇರಿ, ಜ. ೧೦: ಹರದೂರು ಗ್ರಾ.ಪಂ. ಯಿಂದ ವರ್ಗಾವಣೆಗೊಂಡಿರುವ ಪಿಡಿಓ ವಿ.ಜಿ. ಲೋಕೇಶ್ ಅವರನ್ನು ಪಂ. ಅಧ್ಯಕ್ಷ ಮತ್ತು ಆಡಳಿತ ಮಂಡಳಿ ಸದಸ್ಯರು ಬೀಳ್ಕೊಟ್ಟರು.

ಹರದೂರು ಗ್ರಾ. ಪಂ.ಯಲ್ಲಿ ಕಳೆದ ೩ ವರ್ಷಗಳ ಕಾಲ ಪಿಡಿಓ ಆಗಿ ಕರ್ತವ್ಯ ನಿರ್ವಹಿಸಿ ವಾಲ್ನೂರು ತ್ಯಾಗತ್ತೂರು ಗ್ರಾ. ಪಂ. ಅಭಿವೃದ್ಧಿ ಅಧಿಕಾರಿಯಾಗಿ ವರ್ಗಾವಣೆ ಗೊಂಡಿರುವ ವಿ.ಜಿ. ಲೋಕೇಶ್ ಅವರ ಸೇವೆಯನ್ನು ಪರಿಗಣಿಸಿ ಗ್ರಾ. ಪಂ. ಅಧ್ಯಕ್ಷ ಪದ್ಮನಾಭ ಹಾಗೂ ಉಪಾಧ್ಯಕ್ಷೆ ಬೋಜಮ್ಮ, ಕಾರ್ಯದರ್ಶಿ ನವ್ಯ ಹಾಗೂ ಸದಸ್ಯರುಗಳು ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಈ ಸಂದರ್ಭ ಪಂಚಾಯಿತಿ ಸಿಬ್ಬಂದಿಗಳು, ವಿವಿಧ ಇಲಾಖೆಯ ಸಿಬ್ಬಂದಿಗಳು, ಆರೋಗ್ಯ ಸಹಾಯಕಿಯರು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿ ಯರು, ಆಶಾ ಕಾರ್ಯಕರ್ತೆಯರು ಹಾಜರಿದ್ದರು.