ಮಡಿಕೇರಿ, ಜ. ೧೧: ಜಿಲ್ಲೆಯ ಪವಿತ್ರ ಕ್ಷೇತ್ರವಾದ ಭಾಗಮಂಡಲ ಭಗಂಡೇಶ್ವರ ಕ್ಷೇತ್ರದಲ್ಲಿ ಪಿಂಡ ಪ್ರದಾನ ದೈವಿಕ ಕೈಂಕರ್ಯಕ್ಕೆ ನಿರ್ಬಂಧ ವಿಧಿಸಿರುವ ಕ್ರಮ ಸರಿಯಲ್ಲ. ಇದನ್ನು ಜಿಲ್ಲಾಡಳಿತ ತಕ್ಷಣ ಹಿಂಪಡೆಯುವAತೆ ವಿಧಾನ ಪರಿಷತ್ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ ಆಗ್ರಹಿಸಿದ್ದಾರೆ.

ಈ ಕುರಿತು ‘ಶಕ್ತಿ’ಗೆ ಹೇಳಿಕೆ ನೀಡಿರುವ ಅವರು ಜಿಲ್ಲೆಯ ಮೂಲನಿವಾಸಿಗಳಿಗೆ ಇದು ಸಂಪ್ರದಾಯಬದ್ಧವಾದ, ನಂಬಿಕೆಯ ಧ್ಯೋತಕವಾದ ಕಾರ್ಯವಾಗಿದೆ. ಈ ಕೈಂಕರ್ಯಕ್ಕೆAದೇ ಜಿಲ್ಲೆಯ ನಿವಾಸಿಗಳು ಕ್ಷೇತ್ರಕ್ಕೆ ಆಗಮಿಸುತ್ತಾರೆ ಹೊರತು ಇವರು ಯಾರೂ ಕೂಡ ಪ್ರವಾಸಿಗರು ಅಲ್ಲ ಎಂಬುದನ್ನು ಅರ್ಥೈಸಿಕೊಳ್ಳಬೇಕು ಎಂದಿದ್ದಾರೆ.

ಕೇವಲ ಧಾರ್ಮಿಕ ಹಿನ್ನೆಲೆಯಂತೆ ಆಗಮಿಸುವ ಸ್ಥಳೀಯರಿಗೆ ಇಂತಹ ನಿರ್ಬಂಧ ಸರಿಯಲ್ಲ. ಕಟ್ಟುಪಾಡಿನಂತೆ ಆಗಮಿಸುವವರಿಗೆ ಅವಕಾಶ ನೀಡಬೇಕು. ಪ್ರವಾಸಕ್ಕೆಂದು ಬಂದವರಿಗೆ ಬೇಕಾದಲ್ಲಿ ನಿಯಮ ಜಾರಿಗೊಳಿಸಲಿ. ಆದರೆ ಪದ್ಧತಿಯಂತೆ ತೆರಳುವವರಿಗೆ ಪಿಂಡ ಪ್ರದಾನಕ್ಕೆ ಅವಕಾಶ ನೀಡಬೇಕಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನ ಹರಿಸಿ ವ್ಯವಸ್ಥೆ ಸರಿಪಡಿಸಬೇಕು ಎಂದು ವೀಣಾ ಅಚ್ಚಯ್ಯ ಆಗ್ರಹಿಸಿದ್ದಾರೆ.