ಕುಶಾಲನಗರ, ಜ. ೧೦: ದ್ವಿಚಕ್ರ ವಾಹನ ಒಂದಕ್ಕೆ ಡಿಕ್ಕಿ ಆಗುವುದನ್ನು ತಪ್ಪಿಸಲು ಕಾರಿನ ಚಾಲಕ ದಿಢೀರನೆ ಬ್ರೇಕ್ ಹಾಕಿದ ಸಂದರ್ಭ ಸರಣಿ ಅಪಘಾತ ಆಗಿರುವ ಘಟನೆ ಕುಶಾಲನಗರ ತಾವರೆಕೆರೆ ಬಳಿ ಸಂಭವಿಸಿದೆ.
ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಕಾರುಗಳಿಗೆ ಮಾತ್ರ ಅಲ್ಪಸ್ವಲ್ಪ ಜಖಂ ಉಂಟಾಗಿದೆ.
ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಮಹಿಳೆ ಎದುರಿನಿಂದ ಬರುತ್ತಿದ್ದ ಬಸ್ ಕಂಡು ತನ್ನ ವಾಹನ ನಿಲ್ಲಿಸಿದ ಸಂದರ್ಭ ಹಿಂದಿನಿAದ ವೇಗವಾಗಿ ಬರುತ್ತಿದ್ದ ಕಾರು ಚಾಲಕ ಏಕಾಏಕಿ ಬ್ರೇಕ್ ಅದುಮಿದ ಕಾರಣ ಹಿಂದಿನಿAದ ಬರುತ್ತಿದ್ದ ವಾಹನಗಳು ಒಂದಕ್ಕೊAದು ಡಿಕ್ಕಿಯಾಗಿವೆ.
ಘಟನೆ ನಂತರ ಹೆದ್ದಾರಿಯಲ್ಲಿ ರಸ್ತೆ ಸಂಚಾರಕ್ಕೆ ಸ್ವಲ್ಪಕಾಲ ಅಡ್ಡಿ ಉಂಟಾಯಿತು. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಬಂದ ಕುಶಾಲನಗರ ಸಂಚಾರಿ ಪೊಲೀಸರು ವಾಹನಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.