*ಗೋಣಿಕೊಪ್ಪ, ಜ. ೧೦: ಸರ್ಕಾರದ ಹಣವನ್ನು ದುರುಪಯೋಗ ಪಡಿಸಿಕೊಂಡು ಅಮಾನತ್ತಿನಲ್ಲಿರುವ ಸಿಬ್ಬಂದಿಗಳಿಗೆ ಬೆಂಬಲವಾಗಿರುವವರು ಯಾರೇ ಆಗಿದ್ದರೂ ಅಂತವರ ಮೇಲೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲು ಪೊಲೀಸ್ ಇಲಾಖೆ ಮುಂದಾಗ ಬೇಕೆಂದು ಶಾಸಕ ಕೆ.ಜಿ. ಬೋಪಯ್ಯ ಪೊಲೀಸ್ ಅಧಿಕಾರಿಗೆ ಸೂಚಿಸಿದರು.

ಕುಟ್ಟ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅಲ್ಲಿನ ಅವ್ಯವಹಾರದ ಬಗ್ಗೆ ಕೂಲಂಕುಷವಾಗಿ ಶಾಸಕರು ಮಾಹಿತಿ ಪಡೆದುಕೊಂಡರು.

ಸಿಬ್ಬಂದಿಗಳು ಹಣ ದುರುಪಯೋಗ ಪಡಿಸಿಕೊಳ್ಳಲು ಪ್ರಬಲ ವ್ಯಕ್ತಿಗಳ ಬೆಂಬಲ ಇರುವುದು ಮೇಲ್ನೋಟಕ್ಕೆ ಕಂಡುಬAದಿದೆ. ಇಂತಹವರ ಮೇಲೆ ಕ್ರಮಕೈಗೊಳ್ಳ ಬೇಕಾದ ಅಗತ್ಯವಿದೆ. ಸಿಬ್ಬಂದಿಗಳು ಜಾಮೀನಿನಲ್ಲಿ ಬಿಡುಗಡೆ ಹೊಂದಿದರೂ ನ್ಯಾಯಾಲಯದಲ್ಲಿ ಪೊಲೀಸರು ಮನವಿ ಸಲ್ಲಿಸಿ ಎರಡು ದಿನ ಸುಪರ್ದಿಗೆ ಪಡೆದು ನೈಜ್ಯ ಅಂಶವನ್ನು ಬಯಲಿಗೆಳೆಯಬೇಕು. ಇದುವರೆಗೆ ಪಂಚಾಯಿತಿಯ ಹಣವನ್ನು ಎಷ್ಟು ಪ್ರಮಾಣದಲ್ಲಿ ಲೂಟಿ ಮಾಡಿದ್ದಾರೆ ಎಂಬುವುದನ್ನು ತಿಳಿದುಕೊಳ್ಳಬೇಕಾದ ಅಗತ್ಯವಿದೆ ಎಂದು ಹೇಳಿದರು.

ಅಕ್ರಮವೆಸಗಿದ ವ್ಯಕ್ತಿಯ ಪತ್ನಿ ವಿದ್ಯಾರ್ಹತೆ ಇಲ್ಲದೇ ಪಂಚಾಯಿತಿ ಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ಕಂಡುಬAದಿದೆ. ಆಕೆಯನ್ನು ಕೆಲಸದಿಂದ ವಜಾಗೊಳಿಸಬೇಕು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷರಿಗೆ ಶಾಸಕರು ಸೂಚಿಸಿದರು.

ಅವ್ಯವಹಾರ ನಡೆಸಿದ ವ್ಯಕ್ತಿ ಸಂಬAಧಿಕರಾಗಿದ್ದರೂ ಯಾವುದೇ ಬಂಧುತ್ವವನ್ನು ಮುಂದಿಟ್ಟುಕೊಳ್ಳದೇ ನಿರ್ದಾಕ್ಷೀಣ್ಯವಾಗಿ ಅವ್ಯವಹಾರವನ್ನು ಬಯಲಿಗೆಳೆದ ಉಪಾಧ್ಯಕ್ಷೆ ದಿವ್ಯ ಮನೋಜ್ ಅವರ ಕಾರ್ಯವನ್ನು ಶಾಸಕರು ಶ್ಲಾಘಿಸಿ ಗೌರವಿಸಿದರು.

ಈ ಸಂದರ್ಭ ಪಂಚಾಯಿತಿ ಅಧ್ಯಕ್ಷ ಟಿ.ಎಂ. ಗಣಪತಿ, ಸದಸ್ಯರು ಗಳಾದ ಜೆ.ಡಿ. ಮಣಿ, ಹೆಚ್.ಎನ್. ಹೇಮಾ, ಜಿ.ಎಸ್. ಲಕ್ಷಿ÷್ಮ, ಜಿ.ಆರ್. ವಿನೋದ್, ಎಂ.ಕೆ. ಶಾಂತಿ, ಕೆ. ಜನಾರ್ಧನ್, ಕೆ. ಕರ್ಪಯ್ಯ, ತೀತಿರ ಎಂ. ತೀರ್ಥ, ಪಿ.ಎಸ್. ಬೊಳಿಯ, ಹೆಚ್.ವೈ ರಾಮಕೃಷ್ಣ, ವೈ.ಎನ್. ಮೀನ, ಪಿ.ಸಿ. ಸುಬ್ಬ, ಪಿ.ಯು. ರಮ್ಲ, ಡಿ.ಕೆ.ಪ್ರೇಮ, ಶಕ್ತಿ ಕೇಂದ್ರದ ಪ್ರಮುಖ್ ಮಂಜುನಾಥ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಚೋಡುಮಾಡ ಶರಿನ್ ಸುಬ್ಬಯ್ಯ, ಕೆ. ಬಾಡಗ ಶಕ್ತಿಕೇಂದ್ರದ ಪ್ರಮುಖ್ ಪೆಮ್ಮಣಮಾಡ ನವೀನ್, ಕುಟ್ಟ ಠಾಣಾ ಉಪನಿರೀಕ್ಷಕ ಚಂದ್ರಪ್ಪ, ಪಿ.ಡಿ.ಓ ಚಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

-ಎನ್.ಎನ್. ದಿನೇಶ್