ಮಡಿಕೇರಿ, ಜ. ೯ : ಭೂಮಿಯೊಳಗಿರುವ ನಿಕ್ಷೇಪದಲ್ಲಿ ದೊರಕುವ ಹರಳು ಕಲ್ಲುಗಳಿಗೆ ಭಾರೀ ಬೆಲೆಯಿದೆ., ಅದರಲ್ಲೂ ನಿಶಾನೆ ಮೊಟ್ಟೆಯಲ್ಲಿ ಸಿಗುವ ಕೆಂಪು ಹರಳು ಕಲ್ಲಿಗೆ ಹೆಚ್ಚಿಗೆ ಬೇಡಿಕೆ ಹಾಗೂ ಬೆಲೆಯಿದೆ. ಹಾಗಾಗಿ ಈ ಕಲ್ಲು ಗಣಿಗಾರಿಕೆ ಕೆಲಸದಲ್ಲಿ ತೊಡಗಿಕೊಳ್ಳುವವರಿಗೂ ಬೇಡಿಕೆ, ಬೆಲೆ ಜಾಸ್ತಿ., ಹೊಂಡ ಕೊರೆದು, ಸುರಂಗದೊಳಗಿಳಿದು ಕಲ್ಲು ತೆಗೆಯುವವರಿಗೆ ಒಂದು ಬಾರಿ ಇಳಿದು ಕಲ್ಲು ತೆಗೆದರೆ ಒಂದು ಲಕ್ಷಕ್ಕೂ ಅಧಿಕ ಸಂಬಳ ಇದೆಯಂತೆ..!

ನಿಶಾನೆ ಮೊಟ್ಟೆಯಲ್ಲಿರುವದು ಬೆಲೆ ಬಾಳುವ ಕೆಂಪು ಹರಳು ಕಲ್ಲು. ಈ ಕಲ್ಲಿಗೆ ಕೆಜಿಯೊಂದಕ್ಕೆ ಒಂದರಿAದ ಒಂದು ಕಾಲು ಲಕ್ಷ ಕಾಳಸಂತೆಯಲ್ಲಿ ಬೆಲೆಯಿದೆ. ಹಾಗಾಗಿಯೇ ಇಲ್ಲಿ ಆಗಾಗ್ಗೆ ಅಕ್ರಮ ಗಣಿಗಾರಿಕೆ ನಡೆಯುತ್ತಿರುವದು. ಒಂದು ಕೆಜಿಗೆ ಒಂದು ಲಕ್ಷ ಹಣ ಸಿಗುವಾಗ ಸ್ಥಳೀಯರಿಗೆ, ಅರಣ್ಯ ಇಲಾಖೆಯವರಿಗೆ ಒಂದಿಷ್ಟು ಕೊಟ್ಟು ಅವರ ಸಹಕಾರದಿಂದಲೇ ಗಣಿಗಾರಿಕೆ ನಡೆಸುತ್ತಾರೆ.