ಮಡಿಕೇರಿ, ಜ. ೯: ಖ್ಯಾತ ಚಲನಚಿತ್ರ ತಾರೆ, ದೇಶಾದ್ಯಂತ ಸುದ್ದಿ ಮಾಡಿರುವ ನಟಿ ಕೊಡಗಿನವರಾದ ರಶ್ಮಿಕಾ ಮಂದಣ್ಣ ಅವರನ್ನು ಟಿವಿ ೯ ವಾಹಿನಿ ಮೂಲಕ ಸನ್ಮಾನಿಸಿ, ಗೌರವಿಸಲಾಯಿತು. ವಾಹಿನಿಯ ೧೫ನೇ ವಾರ್ಷಿಕೋತ್ಸವದ ಅಂಗವಾಗಿ ನವನಕ್ಷತ್ರ ಪುರಸ್ಕಾರದ ಮೂಲಕ ಇವರನ್ನು ಸನ್ಮಾನಿಸಲಾಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹಿರಿಯ ನಟ ರವಿಚಂದ್ರನ್, ಮತ್ತಿತರರು ಭಾಗಿಗಳಾಗಿದ್ದರು.