ಶನಿವಾರಸಂತೆ, ಜ. ೯: ಸಮೀಪದ ಕೊಡ್ಲಿಪೇಟೆಯ ಕಿರಿಕೊಡ್ಲಿ ಮಠದ ಪ್ರಾರ್ಥನಾ ಮಂದಿರದಲ್ಲಿ ಅಖಿಲ ಕರ್ನಾಟಕ ವೀರಶೈವ ಪುರೋಹಿತ ಮಹಾಸಭಾ ರಾಜ್ಯಾಧ್ಯಕ್ಷ ವೇದಬ್ರಹ್ಮ ಚನ್ನೇಶ್ ಶಾಸ್ತಿç ಮಠದ ಅಧ್ಯಕ್ಷತೆಯಲ್ಲಿ ಕಾರ್ಯಕಾರಿಣಿ ಸಭೆ ನಡೆಯಿತು. ಸಭೆಯಲ್ಲಿ ಮುಂದಿನ ದಿನಗಳಲ್ಲಿ ಪ್ರಾರ್ಥನಾ ಮಂದಿರದಲ್ಲಿ ಭಾರತ ಸನಾತನ ಸಂಸ್ಕಾರ ಹಾಗೂ ಧರ್ಮದ ಬಗ್ಗೆ ಕಾರ್ಯಾಗಾರ ಆಯೋಜಿಸುವ ಬಗ್ಗೆ ಚರ್ಚಿಸಲಾಯಿತು.

ಈ ಸಂದರ್ಭ ಮಹಾಸಭಾದ ವತಿಯಿಂದ ಮಠಾಧೀಶ ಸದಾಶಿವ ಸ್ವಾಮೀಜಿಯವರಿಗೆ ಗೌರವ ಸಮರ್ಪಣೆ ಸಲ್ಲಿಸಲಾಯಿತು.

ರಾಜ್ಯ ಕಾರ್ಯದರ್ಶಿ ವೀರಪ್ಪ ದೇವರ್, ಖಜಾಂಚಿ ಮಹಾದೇವಸ್ವಾಮಿ, ನಿರ್ದೇಶಕರಾದ ಸೋಮಶೇಖರ್ ಶಾಸ್ತಿç, ಶಿವಶಂಕರ್ ಶಾಸ್ತಿç, ದೇವರಾಜ್ ಶಾಸ್ತಿç, ಬೆನಕಯ್ಯ ಶಾಸ್ತಿç ಹಾಗೂ ನಾಗರಾಜ್ ಶಾಸ್ತಿç ಉಪಸ್ಥಿತರಿದ್ದರು.