ವೀರಾಜಪೇಟೆ, ಜ. ೮: ನಗರದ ಪಂಜರ್ಪೇಟೆ ಬಳಿಯಿಂದ ಆರ್ಜಿ ಗ್ರಾಮದ ಕಲ್ಲುಬಾಣೆಗೆ ಸಂಪರ್ಕ ಕಲ್ಪಿಸುವ ರಸ್ತೆ ದುರಸ್ತಿ ಕಾಮಗಾರಿಗೆ ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅವರು ತಾ. ೧೨ ರಂದು ಭೂಮಿಪೂಜೆ ನೆರವೇರಿಸಲಿದ್ದಾರೆ.
ಈ ಬಗ್ಗೆ ಕಲ್ಲುಬಾಣೆ ಬಿಜೆಪಿ ಬೂತ್ ಅಧ್ಯಕ್ಷ ಬಿ.ಸಿ. ಕಿರಣ್ ನೇತೃತ್ವದಲ್ಲಿ ಮನವಿ ಸಲ್ಲಿಸಿ ರಸ್ತೆ ದುರಸ್ತಿಗೆ ಕೋರಲಾಗಿತ್ತು. ಮನವಿಗೆ ಸ್ಪಂದಿಸಿದ ಶಾಸಕರು ರೂ. ೧೦ ಲಕ್ಷ ಅನುದಾನ ಬಿಡುಗಡೆಗೊಳಿಸಿದ್ದಾರೆ.
ಮನವಿ ಸಲ್ಲಿಕೆ ಸಂದರ್ಭ ಬಿಜೆಪಿ ಕಾರ್ಯಕರ್ತರಾದ ಕೆ.ಎಂ. ಸಾದಲಿ, ಬಿ.ಎ. ರೇಷ್ಮ, ಬಿ.ಆರ್. ಚಂದ್ರಾವತಿ ಹಾಗೂ ಬೋಜಮ್ಮ ಹಾಜರಿದ್ದರು.