*ಗೋಣಿಕೊಪ್ಪ, ಜ. ೮: ಕಾನೂರು ಗ್ರಾಮ ಪಂಚಾಯಿತಿಯ ೨೦೨೧-೨೨ನೇ ಸಾಲಿನ ಕೋತೂರು ಒಂದನೇ ವಾರ್ಡ್ ಸಭೆಯು ತಾ. ೧೦ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಗ್ರಾ.ಪಂ. ಸದಸ್ಯೆ ಬಿ.ಎಂ. ಭವ್ಯಶ್ರೀ ಅಧ್ಯಕ್ಷತೆಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಲಕ್ಕುಂದದಲ್ಲಿ ನಡೆಯಲಿದ್ದು, ಕೋತೂರು ಎರಡನೇಯ ವಾರ್ಡ್ ಸಭೆ ತಾ. ೧೦ ರಂದು ಅಪರಾಹ್ನ ೨.೩೦ ಗಂಟೆಗೆ ಗ್ರಾ.ಪಂ. ಸದಸ್ಯ ಕುಂಞÂಮಾಡ ಮುತ್ತಪ್ಪ ಅಧ್ಯಕ್ಷತೆಯಲ್ಲಿ ಹಾಗೂ ಕಾನೂರು ಒಂದನೇ ವಾರ್ಡ್ನ ವಾರ್ಡ್ ಸಭೆ ತಾ. ೧೧ ರಂದು ಬೆಳಿಗ್ಗೆ ೧೧ ಗಂಟೆಗೆ ಗ್ರಾ.ಪಂ. ಉಪಾಧ್ಯಕ್ಷ ಸಚಿನ್ ಸೋಮಣ್ಣ. ಕೆ.ಯು ಅಧ್ಯಕ್ಷತೆಯಲ್ಲಿ ಕಾನೂರು ಸಮುದಾಯ ಭವನದಲ್ಲಿ ನಡೆಯಲಿದೆ. ಬೆಕ್ಕೆಸೊಡ್ಲೂರು ವಾರ್ಡ್ ಸಭೆ ತಾ. ೧೨ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಗ್ರಾ.ಪಂ. ಅಧ್ಯಕೆÀ್ಷ ಎಂ.ಡಿ. ರಶ್ಮಿ ಅಧ್ಯಕ್ಷತೆಯಲ್ಲಿ ಬೆಕ್ಕೆಸೊಡ್ಲೂರು ಸ್ಪೋರ್ಟ್ಸ್ ಕ್ಲಬ್ನಲ್ಲಿ ನಡೆಯಲಿದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆರ್.ಜೆ. ಪುಟ್ಟರಾಜು ತಿಳಿಸಿದ್ದಾರೆ.