*ಗೋಣಿಕೊಪ್ಪ, ಜ. ೮: ಕೀರೆ ಹೊಳೆ ಕೈತೋಡು ಒತ್ತುವರಿ ತೆರವುಗೊಳಿಸಿದ ಕೆಲವೇ ದಿನಗಳಲ್ಲಿ ಪೊನ್ನಂಪೇಟೆ ತಿರುವಿನಲ್ಲಿರುವ ಕಟ್ಟಡವೊಂದರ ಮಾಲೀಕರು ಪಂಚಾಯಿತಿ ಅನುಮತಿಯಿಲ್ಲದೇ ತಡೆಗೋಡೆ ನಿರ್ಮಿಸಲು ಮುಂದಾಗಿದ್ದನ್ನು ಪಂಚಾಯಿತಿ ತಡೆದಿದೆ.
ಕೆಲ ದಿನಗಳ ಹಿಂದೆ ಕೀರೆ ಹಾಗೂ ಕೈತೋಡು ಒತ್ತುವರಿ ತೆರವು ಕಾರ್ಯ ನಿರ್ದಾಕ್ಷಿಣ್ಯವಾಗಿ ನಡೆದಿತ್ತು. ಆದರೆ, ಶನಿವಾರದಂದು ಪೊನ್ನಂಪೇಟೆ ತಿರುವಿನಲ್ಲಿರುವ ಕಟ್ಟಡ ಮಾಲೀಕರೊಬ್ಬರು ಕೀರೆಹೊಳೆಗೆ ಹೊಂದಿಕೊAಡAತೆ ಮತ್ತೆ ಕಟ್ಟಡಕ್ಕೆ ತಡೆಗೋಡೆ ನಿರ್ಮಿಸುವ ಪ್ರಯತ್ನಕ್ಕೆ ಮುಂದಾಗಿದ್ದರು. ಕಾರ್ಮಿಕರು ತಡೆಗೋಡೆ ನಿರ್ಮಿಸಲು ಪೂರ್ಣ ವ್ಯವಸ್ಥೆಯನ್ನು ರೂಪಿಸಿಕೊಂಡು ಸೆಂಟ್ರಿAಗ್ ರಾಡ್ಗಳನ್ನು ಕಟ್ಟಿದ್ದರು. ಕಾಂಕ್ರಿಟ್ ಮಾಡಲು ಪ್ರಯತ್ನ ನಡೆಸುತ್ತಿದ್ದ ಸಂದರ್ಭ ಪಂಚಾಯಿತಿ ಅಧ್ಯಕ್ಷೆ ಚೈತ್ರ ಬಿ. ಚೇತನ್ ವಾರ್ಡ್ನ ಸದಸ್ಯರಾದ ಹಕೀಮ್, ಸೌಮ್ಯಬಾಲು, ವಿವೇಕ್ ರಾಯ್ಕರ್ ಹಾಗೂ ಪಿಡಿಓ ತಿಮ್ಮಯ್ಯ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ನಡೆಯದಂತೆ ತಡೆದರು.
ಪಂಚಾಯಿತಿ ಅನುಮತಿ ನೀಡದೇ ಅಕ್ರಮವಾಗಿ ತಡೆಗೋಡೆ ನಿರ್ಮಿಸಲು ಕಾಮಗಾರಿ ಕೈಗೆತ್ತಿಕೊಂಡಿ ರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದÀ ಅಧ್ಯಕ್ಷೆ ಕಾಮಗಾರಿಯನ್ನು ತಕ್ಷಣ ನಿಲ್ಲಿಸುವಂತೆ ಮಾಲೀಕರಿಗೆ ಸೂಚಿಸಿದರು.
ಪಂಚಾಯಿತಿಗೆ ಈಗಾಗಲೇ ಒತ್ತುವರಿ ತೆರವುಗೊಳಿಸಲ್ಪಟ್ಟ ಮನೆ ಹಾಗೂ ಕಟ್ಟಡದ ಮಾಲೀಕರು ತಡೆಗೋಡೆ ನಿರ್ಮಿಸಿಕೊಳ್ಳಲು ಅನುಮತಿ ಕೋರಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಆದರೆ, ಯಾವುದೇ ಅರ್ಜಿಗಳನ್ನು ಪುರಸ್ಕರಿಸಿಲ್ಲ. ಕಾನೂನು ನಿಯಮ ಪಾಲನೆ ಮಾಡಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.