ಅಂರ‍್ರಾಷ್ಟಿçÃಯ ಪ್ರಯಾಣಿಕರು ಕಡ್ಡಾಯ ಕ್ವಾರಂಟೈನ್
ನವದೆಹಲಿ, ಜ. ೭: ಭಾರತಕ್ಕೆ ಬರುವ ಎಲ್ಲಾ ಅಂರ‍್ರಾಷ್ಟಿçÃಯ ಪ್ರಯಾಣಿಕರು ಕಡ್ಡಾಯವಾಗಿ ೭ ದಿನಗಳ ಕಾಲ ಹೋಮ್ ಕ್ವಾರಂಟೈನ್ ಆಗಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಕಳೆದ ಕೆಲವು ದಿನಗಳಿಂದ ದೇಶದ ಅನೇಕ ನಗರಗಳಲ್ಲಿ ಕೋವಿಡ್-೧೯ ಹೊಸ ರೂಪಾಂತರಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಏರಿಕೆ ಕಂಡುಬAದಿರುವ ಹಿನ್ನೆಲೆಯಲ್ಲಿ ಈ ಅಧಿಸೂಚನೆ ಹೊರಡಿಸಲಾಗಿದೆ. ಅಪಾಯದಲ್ಲಿರುವ ನಿರ್ದಿಷ್ಟ ದೇಶಗಳ ಪ್ರಯಾಣಿಕರು ಭಾರತಕ್ಕೆ ಆಗಮಿಸಿದ ನಂತರ ಕೋವಿಡ್ ಪರೀಕ್ಷೆಗಾಗಿ ತಮ್ಮ ಮಾದರಿಗಳನ್ನು ನೀಡಬೇಕು ಮತ್ತು ಹೊಸ ನಿಯಮಗಳ ಪ್ರಕಾರ ಅವರ ಪರೀಕ್ಷಾ ಫಲಿತಾಂಶ ಬಂದ ನಂತರವೇ ಅವರಿಗೆ ವಿಮಾನ ನಿಲ್ದಾಣದಿಂದ ಹೊರಹೋಗಲು ಅನುಮತಿಸಲಾಗುತ್ತದೆ. ಏತನ್ಮಧ್ಯೆ, ಕೊರೊನಾ ವೈರಸ್ ಮತ್ತು ಓಮಿಕ್ರಾನ್ ಪ್ರಕರಣಗಳ ಉಲ್ಬಣವನ್ನು ಗಮನದಲ್ಲಿಟ್ಟುಕೊಂಡು ಕೇರಳ ಸರ್ಕಾರ ಸಹ ವಿದೇಶದಿಂದ ಬರುವ ಎಲ್ಲರಿಗೂ ಒಂದು ವಾರ ಹೋಮ್ ಕ್ವಾರಂಟೈನ್ ಕಡ್ಡಾಯಗೊಳಿಸಲು ನಿರ್ಧರಿಸಿದೆ. ಕೇರಳದಲ್ಲಿ ಇದುವರೆಗೆ ೨೮೦ ಓಮಿಕ್ರಾನ್ ಪ್ರಕರಣಗಳು ದಾಖಲಾಗಿವೆ ಮತ್ತು ಕಡಿಮೆ ಅಪಾಯದ ದೇಶಗಳಿಂದ ಬಂದವರಿAದ ಗರಿಷ್ಠ ಸಂಖ್ಯೆಯ ಪ್ರಕರಣಗಳು ವರದಿಯಾಗಿವೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಹೇಳಿದ್ದಾರೆ.
ಜೆ.ಡಿ.ಎಸ್.ನಿಂದ ಜನತಾ ಜಲಧಾರೆ ಆಂದೋಲನ
ಬೆAಗಳೂರು, ಜ. ೭: ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಕ್ಷ ತಾ. ೯ ರಿಂದ ಆರಂಭಿಸಲಿರುವ ಪಾದಯಾತ್ರೆಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಜೆಡಿಎಸ್ ಕೂಡಾ ಜನತಾ ಜಲಧಾರೆ ಆಂದೋಲನವನ್ನು ಆರಂಭಿಸುತ್ತಿದೆ. ಈ ಕುರಿತು ಪಕ್ಷದ ಕೇಂದ್ರ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ಶಾಸಕಾಂಗ ಪಕ್ಷದ ಮುಖಂಡ ಹೆಚ್.ಡಿ. ಕುಮಾರಸ್ವಾಮಿ, ತಾ. ೨೬ ರಿಂದ ಆಂದೋಲನ ಪ್ರಾರಂಭವಾಗಲಿದ್ದು, ೨೦೨೩ರ ಚುನಾವಣೆಯವರೆಗೂ ಮುಂದುವರೆಯಲಿದೆ. ನದಿ ಮೂಲಗಳಲ್ಲಿರುವ ೫೧ ಸ್ಥಳಗಳಿಗೆ ಯಾತ್ರೆ ಮೂಲಕ ಭೇಟಿ ನೀಡಲಾಗುವುದು ಎಂದರು. ಆಂದೋಲನಾಕ್ಕಾಗಿ ಪಕ್ಷದ ಶಾಸಕರು, ಮಾಜಿ ಸಚಿವರು, ಹಿರಿಯ ಮುಖಂಡರ ನೇತೃತ್ವದಲ್ಲಿ ೧೫ ತಂಡಗಳನ್ನು ರಚಿಸಲಾಗುವುದು, ಈ ತಂಡಗಳು ನದಿ ಮೂಲಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ, ಜಲ ಸಂಗ್ರಹಿಸಲಿವೆ. ತಾ. ೨೬ ರಂದು ಆಂದೋಲನಾ ಖಚಿತ. ಒಂದುವೇಳೆ ಕೋವಿಡ್ ಹೆಚ್ಚಾದಲ್ಲಿ ಕೆಲವು ದಿನಗಳವರೆಗೂ ಇದನ್ನು ಮುಂದೂಡಲಾಗುವುದು ಎಂದು ಅವರು ತಿಳಿಸಿದರು. ಜೆಡಿಎಸ್‌ಗೆ ಸಂಪೂರ್ಣ ಬಹುಮತದೊಂದಿಗೆ ಐದು ವರ್ಷಗಳ ಪೂರ್ಣವಧಿ ಅಧಿಕಾರ ನೀಡಿದರೆ ರಾಜ್ಯದ ಎಲ್ಲ ನದಿಗಳ ನೀರಿನ ಸಮರ್ಪಕ ಬಳಕೆಗೆ ಯೋಜನೆ ರೂಪಿಸಿ, ಅನುಷ್ಠಾನಕ್ಕೆ ಬರುವ ಭರವಸೆಯೊಂದಿಗೆ, ಜನರ ಎದುರು ಬೆಂಬಲ ಕೋರಲಾಗುವುದು ಎಂದರು.
ನ್ಯಾಯಾಧೀಶರ ಅಪಘಾತ ಪ್ರಕರಣ-ಸಿಬಿಐ ಮಾಹಿತಿ
ರಾಂಚಿ, ಜ. ೭: ಧನ್ಬಾದ್ ಹಿಟ್ ಅಂಡ್ ರನ್ ಪ್ರಕರಣಕ್ಕೆ ಹೊಸ ತಿರುವು ನೀಡಿರುವ ಸಿಬಿಐ, ನ್ಯಾಯಾಧೀಶ ಉತ್ತಮ್ ಆನಂದ್ ಅವರ ಮೊಬೈಲ್ ಕಸಿದುಕೊಳ್ಳುವ ಪ್ರಯತ್ನದಲ್ಲಿ ಆಟೋರಿಕ್ಷಾ ಅವರಿಗೆ ಡಿಕ್ಕಿ ಹೊಡೆದಿರಬಹುದು ಎಂದು ಶುಕ್ರವಾರ ಜಾರ್ಖಂಡ್ ಹೈಕೋರ್ಟ್ಗೆ ಮಾಹಿತಿ ನೀಡಿದೆ. ಆದಾಗ್ಯೂ, ತನಿಖೆ ಇನ್ನೂ ಮುಂದುವರೆದಿದೆ ಮತ್ತು ಪ್ರಕರಣಕ್ಕೆ ಸಂಬAಧಿಸಿದAತೆ ಹೆಚ್ಚಿನ ವಿವರಗಳನ್ನು ಪಡೆಯಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಸಿಬಿಐ ಇಂದು ಹೈಕೋರ್ಟ್ಗೆ ತಿಳಿಸಿದೆ. ಕಳೆದ ವರ್ಷ ಜುಲೈ ೨೮ ರಂದು ನ್ಯಾಯಾಧೀಶರು ಬೆಳಗಿನ ಜಾವ ವಾಕಿಂಗ್ ಹೋಗುತ್ತಿದ್ದಾಗ ನಿರ್ಜನ ರಸ್ತೆಯಲ್ಲಿ ಆಟೋರಿಕ್ಷಾ ಹಿಂದಿನಿAದ ಬಂದು ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿರುವ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಹೀರಾಪುರದ ಜಡ್ಜ್ ಕಾಲೋನಿಯಲ್ಲಿರುವ ಉತ್ತಮ್ ಆನಂದ್ ಅವರ ಮನೆಯಿಂದ ೫೦೦ ಮೀಟರ್‌ಗಿಂತ ಕಡಿಮೆ ದೂರದಲ್ಲಿರುವ ಗಾಲ್ಫ್ ಮೈದಾನದ ಬಳಿ ಈ ಘಟನೆ ನಡೆದಿತ್ತು. ಈ ಘಟನೆಯು ಅಪಘಾತಕ್ಕಿಂತ ಉದ್ದೇಶಪೂರ್ವಕ ಕೊಲೆ ಎಂದು ಸೂಚಿಸುವ ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆದ ಕೆಲವೇ ಗಂಟೆಗಳಲ್ಲಿ ಜಾರ್ಖಂಡ್ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿತ್ತು ಮತ್ತು ಇದು ನ್ಯಾಯಾಂಗದ ಮೇಲಿನ ನೇರ ದಾಳಿ ಎಂದು ಕರೆದಿತ್ತು. ಈ ನಿಟ್ಟಿನಲ್ಲಿ ಇದುವರೆಗೆ ೨೦೦ಕ್ಕೂ ಹೆಚ್ಚು ಜನರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದೆ. ಇಬ್ಬರು ಆರೋಪಿಗಳ ನಾರ್ಕೋ ಪರೀಕ್ಷೆ ಮತ್ತು ಬ್ರೈನ್ ಮ್ಯಾಪಿಂಗ್ ಅನ್ನು ಮತ್ತೊಮ್ಮೆ ನಡೆಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ ಎಂದು ಸಿಬಿಐ ಹೇಳಿದೆ.
ರೂ. ೪,೨೩೬ ಕೋಟಿ ಮೊತ್ತದ ಯೋಜನೆಗಳಿಗೆ ಅನುಮೋದನೆ
ಬೆಂಗಳೂರು, ಜ. ೭: ರಾಜ್ಯದಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಮತ್ತಷ್ಟು ಉತ್ತೇಜನ ನೀಡಲು ಮುಂದಾಗಿರುವ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯು ರೂ. ೪,೨೩೬ ಕೋಟಿ ಮೊತ್ತದ ೮೭ ಯೋಜನೆಗಳಿಗೆ ಅನುಮೋದನೆ ನೀಡಿದೆ. ಈ ಅನುಮೋದನೆಯಿಂದಾಗಿ ರಾಜ್ಯದಲ್ಲಿ ಸುಮಾರು ೧೨,೨೫೧ಕ್ಕೂ ಹೆಚ್ಚಿನ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಅಧ್ಯಕ್ಷತೆಯಲ್ಲಿ ನಡೆದ ೧೨೮ನೇ ರಾಜ್ಯಮಟ್ಟದ ಏಕಗವಾಕ್ಷಿ ತೆರವು ಸಮಿತಿ ಸಭೆಯಲ್ಲಿ ಈ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಆರ್. ಅಶೋಕ್‌ಗೆ ಕೊರೊನಾ
ಬೆಂಗಳೂರು, ಜ. ೭: ಕಂದಾಯ ಸಚಿವ ಆರ್ ಅಶೋಕ್‌ಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಹಿನ್ನೆಲೆ ಅಶೋಕ್ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಿನ್ನೆ ಸಚಿವ ಸಂಪುಟ ಸಭೆಗೂ ಅಶೋಕ್ ಗೈರಾಗಿದ್ದರು. ಈ ಹಿಂದೆ ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರಿಗೂ ಕೊರೊನಾ ಪಾಸಿಟಿವ್ ಕಂಡುಬAದಿತ್ತು, ಕರ್ನಾಟಕದಲ್ಲಿ ಕೊರೊನಾ ಹಾಗೂ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿವೆೆ.
ಲಾಕ್‌ಡೌನ್ ಇಲ್ಲ-ಕಟ್ಟುನಿಟ್ಟಿನ ನಿಯಮ ಮಾತ್ರ
ಬೆಂಗಳೂರು, ಜ. ೭: ರಾಜ್ಯದಲ್ಲಿ ಲಾಕ್‌ಡೌನ್ ಕಳೆದುಹೋಗಿರುವ ನೀತಿ, ರಾಜ್ಯದಲ್ಲಿ ಸಂಪೂರ್ಣ ಲಾಕ್‌ಡೌನ್ ಇನ್ನು ಮುಂದೆ ಇರುವುದಿಲ್ಲ, ಇನ್ನೇನಿದ್ದರೂ ನಿರ್ಬಂಧ, ನಿಯಮಗಳ ಕಟ್ಟುನಿಟ್ಟಿನ ಪಾಲನೆಯಷ್ಟೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಶುಕ್ರವಾರ ತಿಳಿಸಿದ್ದಾರೆ. ಎರಡು ವಾರಗಳ ಕಾಲ ಕೋವಿಡ್ ನಿರ್ಬಂಧ, ವೀಕೆಂಡ್ ಕರ್ಫ್ಯೂ ಎಂದು ಹೇರಿದ್ದ ಸರ್ಕಾರ ಇನ್ನು ಮುಂದೆ ಲಾಕ್‌ಡೌನ್ ಮಾಡುತ್ತದೆಯೇ ಎಂಬ ಸಂಶಯ, ಗೊಂದಲ, ಭಯ-ಆತಂಕ ರಾಜ್ಯದ ಜನರಲ್ಲಿ ಮನೆಮಾಡಿತ್ತು. ಅದಕ್ಕೆ ಆರೋಗ್ಯ ಸಚಿವರೇ ಇಂದು ತೆರೆ ಎಳೆದಿದ್ದಾರೆ. ಬೆಂಗಳೂರಿನಲ್ಲಿAದು ಸುದ್ದಿಗಾರರ ಜೊತೆ ಮಾತನಾಡಿದ ಆರೋಗ್ಯ ಸಚಿವರು, ಕೊರೊನಾ ಮೂರನೇ ಅಲೆಯ ಈ ಸಂದರ್ಭದಲ್ಲಿ ಜನರು ಸ್ವಆಸಕ್ತಿಯಿಂದ ಮುಂದೆ ಬಂದು ಕೋವಿಡ್ ಲಸಿಕೆಯ ಎರಡೂ ಡೋಸ್ ಹಾಕಿಸಿಕೊಳ್ಳಬೇಕು ಎಂದರು.
ಪಾಕ್ : ಮೊದಲ ಮಹಿಳಾ ನ್ಯಾಯಮೂರ್ತಿ
ಇಸ್ಲಮಾಬಾದ್, ಜ. ೭: ಲಾಹೋರ್ ಹೈಕೋರ್ಟ್ನ ನ್ಯಾಯಮೂರ್ತಿ ಆಯಿಷಾ ಮಲಿಕ್ ಅವರನ್ನು ಪಾಕಿಸ್ತಾನದ ಸುಪ್ರೀಂ ಕೋರ್ಟ್ನ ಮೊದಲ ಮಹಿಳಾ ನ್ಯಾಯಮೂರ್ತಿಯಾಗಿ ಆಯ್ಕೆಮಾಡಲಾಗಿದೆ. ಚೀಫ್ ಜಸ್ಟಿಸ್ ಗುಲ್ಜಾರ್ ಅಹ್ಮದ್ ನೇತೃತ್ವದಲ್ಲಿ ಪಾಕಿಸ್ತಾನ ನ್ಯಾಯಾಂಗ ಆಯೋಗ(ಜೆಸಿಪಿ) ನಾಲ್ವರ ವಿರುದ್ಧ ಐದು ಬಹುಮತಗಳಿಂದ ಗೆದ್ದ ನ್ಯಾಯಮೂರ್ತಿ ಆಯಿಷಾ ಮಲಿಕ್ ಅವರನ್ನು ನ್ಯಾಯಮೂರ್ತಿಯಾಗಿ ನೇಮಕಗೊಳಿಸಲು ಅನುಮೋದಿಸಿದೆ. ನ್ಯಾಯಮೂರ್ತಿ ಆಯಿಷಾ ಮಲಿಕ್ ಅವರ ಬಡ್ತಿಗೆ ಸಂಬAಧಿಸಿದAತೆ ಜೆಸಿಪಿ ಸಭೆ ನಡೆಸುತ್ತಿರುವ ಎರಡನೇ ಬಾರಿ ಸಭೆ ಇದಾಗಿದ್ದು, ಕಳೆದ ವರ್ಷ ಸೆಪ್ಟೆಂಬರ್ ೯ ರಂದು ಮೊದಲ ಬಾರಿಗೆ ಆಯಿಷಾ ಮಲಿಕ್ ಅವರ ಹೆಸರು ಕೇಳಿಬಂದಿತ್ತು. ಆ ವೇಳೆ ನಾಲ್ವರ ವಿರುದ್ಧ ನಾಲ್ಕು ಅಂದರೆ ಸಮಾನ ಮತಗಳನ್ನು ಪಡೆದಿದ್ದ ಕಾರಣ ಅವರ ಹೆಸರನ್ನು ನಿರಾಕರಿಸಲಾಗಿತ್ತು.