ಮಡಿಕೇರಿ,ಜ.೭: ಅಲ್ಲಿಗೆ ಕಾಡು ಪ್ರಾಣಿಗಳು ಬಿಟ್ಟರೆ ಅರಣ್ಯ ಇಲಾಖೆಯವರಿಗೆ ಮಾತ್ರ ಪ್ರವೇಶ., ಜನರು ಸಾಕಿದ ಜಾನುವಾರುಗಳು ಕೂಡ ಅತ್ತ ಸುಳಿದಾಡುವಂತಿಲ್ಲ., ಅಪ್ಪಿ ತಪ್ಪಿ ಮೇಯುತ್ತಾ ಹೋಗಿ ಬಿಟ್ಟರೂ ಅರಣ್ಯ ರಕ್ಷಕರು(?) ಅಲ್ಲಿಂದ ಓಡಿಸದೆ ಬಿಡಲಾರರು.., ಆದರೆ ಕಳ್ಳರು., ದಂಧೆಕೋರರಿಗೆ ಭವ್ಯ ಸ್ವಾಗತವಿದೆ..! ಇದಕ್ಕೆ ಪುಷ್ಟಿ ಎಂಬAತೆ ಸರ್ಪ ಗಾವಲಿನಲ್ಲಿರುವ ಅರಣ್ಯ ಇಲಾಖಾ ಕ್ಯಾಂಪ್ ಬಳಿಯೇ ನಡೆಯುತ್ತಿರುವ ಅಕ್ರಮ ಹರಳು ಕಲ್ಲು ಗಣಿಗಾರಿಕೆ..!

ಪಟ್ಟಿಘಾಟ್ ಮೀಸಲು ಅರಣ್ಯ ವ್ಯಾಪ್ತಿಯ ಸುಮಾರು ೨೨೦೦ ಹೆಕ್ಟೇರ್ ಪ್ರದೇಶದೊಳಗಿರುವ ಭಾಗಮಂಡಲ ವಲಯದ ತಣ್ಣಿಮಾನಿ ಬಳಿಯ ತಾವೂರು ಗ್ರಾಮಕ್ಕೆ ಒಳಪಡುವ ತೊಡಿಕಾನ ಉಪ ವಲಯದ ನಿಶಾನೆ ಮೊಟ್ಟೆ ನಿಸರ್ಗ ರಮಣೀಯ ಪ್ರದೇಶದಲ್ಲಿದೆ. ಈ ಪ್ರದೇಶದ ಕಣಿವೆಯಲ್ಲಿ ಕೆಂಪು ಹರಳು ಕಲ್ಲಿನ ನಿಕ್ಷೇಪವಿದೆ. ಈ ಹಿಂದೆ ಇಲ್ಲಿ ನಾಲ್ಕು ಬಾರಿ ಗಣಿಗಾರಿಕೆ ನಡೆದು ಗಲಾಟೆಗಳು ಆದ ಬಳಿಕ ಜಿಲ್ಲಾಡಳಿತದ ಆದೇಶದಂತೆ ನಿಕ್ಷೇಪಕ್ಕಾಗಿ ತೋಡಲಾಗಿದ್ದ ಎರಡು ಹೊಂಡಗಳನ್ನು ೨೦೧೪ರಲ್ಲಿ ಕಾಂಕ್ರಿಟ್ ಹಾಕಿ ಮುಚ್ಚಲಾಗಿದೆ. ಈ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ ಇಲ್ಲಿಗೆ ಸಾರ್ವಜನಿಕರಿಗೆ ಪ್ರವೇಶ ನಿರಾಕರಿಸಲಾಯಿತು. ಇದಾದ ಬಳಿಕ ೨೦೧೯ರಲ್ಲಿ ಮತ್ತೆ ಸದ್ದಿಲ್ಲದೆ ಇಲ್ಲಿ ಗಣಿಗಾರಿಕೆ ಆರಂಭಗೊAಡು ಯಾವದೇ ಕ್ರಮ ಇಲ್ಲದೆ ಮುಚ್ಚಿ ಹಾಕಲಾಯಿತು. ಇದೀಗ ಮತ್ತೆ ಇಲ್ಲಿ ಅಕ್ರಮ ಗಣಿಗಾರಿಕೆ ಆರಂಭಗೊAಡಿದೆ. ಅದೂ ಅರಣ್ಯ ಇಲಾಖಾ ಸಿಬ್ಬಂದಿಗಳು ಕಾವಲಿರುವ ಕ್ಯಾಂಪ್‌ನ ಅಂಗಳದಲ್ಲಿ..!

ಕ್ಯಾAಪ್ ಬಳಿಯಲ್ಲೇ ಮಣ್ಣು..!

ಹರಳು ಕಲ್ಲಿಗಾಗಿ ಬಗೆಯಲಾದ ಮಣ್ಣನ್ನು ಕ್ಯಾಂಪ್‌ನಿAದ ಅನತಿ ದೂರದಲ್ಲಿ ಸುರಿಯಲಾಗಿದೆ. ಒಂದಷ್ಟು ಮಣ್ಣನ್ನು ಚೀಲಗಳಲ್ಲಿ ತುಂಬಿಡಲಾಗಿತ್ತು. ಗಣಿಗಾರಿಕೆ ನಡೆಯುತ್ತಿದೆ ಎಂಬ ವರದಿ ಪ್ರಕಟವಾದ ದಿನದಂದು ಅಲ್ಲಿ ೨-೩ ಪಿಕ್ ಅಪ್‌ನಷ್ಟು ಮಣ್ಣು ಇರುವದಾಗಿ ಅಧಿಕಾರಿಗಳು ವರದಿ ಸಲ್ಲಿಸಿದ್ದರು. ಆದರೆ, ಮೂರು ದಿನಗಳ ಬಳಿಕ ಹೋಗಿ ನೋಡುವಾಗ ಅಲ್ಲಿ ಸ್ವಲ್ಪ ಮಾತ್ರ ಮಣ್ಣಿನ ರಾಶಿ ಕಂಡು ಬಂದಿತು. ಒಂದಷ್ಟು ಮಣ್ಣನ್ನು ಸಾಗಿಸಲಾಗಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.

ಗುದ್ದಲಿ, ಪಿಕಾಶಿ, ಪೈಪ್..!

ಅರಣ್ಯಾಧಿಕಾರಿಗಳು ಮೂರು ಬಾರಿ ತೆರಳಿ ಪರಿಶೀಲನೆ ಮಾಡಿದ್ದರೂ ಅವರುಗಳಿಗೆ ಹೊಂಡವಾಗಲೀ, ಯಾವದೇ ಸಾಮಗ್ರಿಗಳಾಗಲೀ ಸಿಕ್ಕಿರಲಿಲ್ಲ. ಅರಣ್ಯ ಸಂಚಾರಿ ದಳದವರು ತೆರಳಿದಾಗ ಹೊಂಡ ಪತ್ತೆಯಾಯಿತು. ನಂತರ ಪಶ್ಚಿಮ ಘಟ್ಟ ಸಂರಕ್ಷಣೆ ಕಾರ್ಯಪಡೆ ಅಧ್ಯಕ್ಷ ರವಿಕುಶಾಲಪ್ಪ ಅವರೊಂದಿಗೆ ಗ್ರಾಮಸ್ಥರು, ಮಾಧ್ಯಮದವರು ತೆರಳಿ ಹುಡುಕಾಡಿದಾಗ ಹೊಂಡದೊಳಗಿನ ಸುರಂಗ, ಪಕ್ಕದಲ್ಲೇ ಇರುವ ತೋಡಿನ ಬಳಿ ಅವಿತಿಟ್ಟಿದ್ದ ಗುದ್ದಲಿ, ಪಿಕಾಶಿ, ಜರಡಿ, ಪೈಪ್, ಟಾರ್ಪಲ್, ಊಟದ ತಟ್ಟೆಗಳು, ಬ್ಯಾಟರಿ ಮುಂತಾದವುಗಳು ಪತ್ತೆಯಾದವು. ಗುದ್ದಲಿ ಪಿಕಾಶಿಗಳಿಗೆ ಕಾವು, ಜರಡಿಗೆ ಬೇಕಾದ ಹಾಗೂ ಹೊಂಡ ಮುಚ್ಚಲು ಬಡಿಗೆಗಳನ್ನು ಕೂಡ ತೋಡಿನ ಬದಿಯಲ್ಲಿನ ಕಾಡಿನಿಂದ ಕಡಿದು ಬಳಸಲಾಗಿರುವುದು ಕಣ್ಣಿಗೆ ರಾಚುವಂತಿದ್ದರೂ ಕೂಡ ಇದ್ಯಾವದೂ ಅರಣ್ಯ ರಕ್ಷಕರಿಗೆ ಗೊತ್ತೇ ಆಗಿಲ್ಲವಂತೆ..!

(ಮೊದಲ ಪುಟದಿಂದ)

ಕ್ಯಾಂಪ್‌ನಲ್ಲೇ ಬಿಡಾರ..!

ನಿಕ್ಷೇಪವಿರುವ ಈ ಸ್ಥಳಕ್ಕೆ ತೆರಳಲು ಒಟ್ಟು ನಾಲ್ಕು ಮಾರ್ಗಗಳಿವೆ. ಅದೂ ಕಾಡು ದಾರಿಗಳು. ಸ್ಥಳಕ್ಕೆ ತಲಪಬೇಕಾದರೆ ಸುಮಾರು ನಾಲ್ಕರಿಂದ ಐದು ಕಿ.ಮೀ. ಬೆಟ್ಟ ಗುಡ್ಡಗಳನ್ನು ಏರಿಳಿಯುತ್ತಾ ಕಾಲ್ನಡಿಗೆಯಲ್ಲೇ ಸಾಗಬೇಕು. ಹಾಗಾಗಿ ಇಲ್ಲಿಗೆ ಪ್ರತಿನಿತ್ಯ ನಡೆದುಕೊಂಡು ಹೋಗಿ ಗಣಿಗಾರಿಕೆ ಮಾಡುವದು ಸುಲಭದ ಮಾತಲ್ಲ. ಈ ದಂಧೆಯಲ್ಲಿ ತೊಡಗಿಸಿಕೊಂಡವರು ಇಲಾಖೆಯ ನೆರಳಿನೊಂದಿಗೆ ಕ್ಯಾಂಪ್‌ನಲ್ಲಿಯೇ ಬಿಡಾರ ಹೂಡಿದ್ದಿರಬಹುದೆಂಬ ಸಂಶಯ ದಟ್ಟವಾಗಿ ಕಾಣಬರುತ್ತದೆ. ಕೇವಲ ಒಂದು ದಿನದಲ್ಲಿ ನಡೆದ ಕೆಲಸವೂ ಇದಲ್ಲ, ಗಟ್ಟಿಯಾದ ಮಣ್ಣನ್ನು ಅಷ್ಟು ಸುಲಭದಲ್ಲಿ ಕೊರೆದು ಹೊಂಡ ತೆಗೆಯಲೂ ಸಾಧ್ಯವಿಲ್ಲ, ಸಂಪೂರ್ಣ ರಾತ್ರಿ ವೇಳೆಯಲ್ಲಿ ಮಾಡಿದ ಕೆಲಸವೂ ಇದಲ್ಲ, ರಾಜಾರೋಷವಾಗಿ ಹಗಲು ವೇಳೆಯಲ್ಲಿಯೇ ಎಲ್ಲ ಕೆಲಸ ಮಾಡಿದಂತೆ ತೋಚುತ್ತದೆ. ಅದೂ ಅಲ್ಲದೆ, ಅಷ್ಟು ದೊಡ್ಡ ಹೊಂಡ ಕೊರೆದು, ಅಷ್ಟೊಂದು ಮಣ್ಣನ್ನು ಹೊತ್ತು ಸಾಗಿಸಲು ಒಂದಿಬ್ಬರಿAದAತೂ ಸಾಧ್ಯವಿಲ್ಲ. ಹತ್ತಾರು ಮಂದಿಯಾದರೂ ಬೇಕಿದೆ. ಅಷ್ಟೊಂದು ಮಂದಿಗೆ ಬೇಕಾದ ಊಟದ ವ್ಯವಸ್ಥೆಗಾಗಿ ಅಕ್ಕ ಪಕ್ಕದಲ್ಲಿ ಎಲ್ಲಿಯೂ ಅಡುಗೆ ಮಾಡಿದ ಕುರುಹುಗಳಿಲ್ಲ. ಹೊಂಡ ಕೊರೆದ ಜಾಗದಲ್ಲಿ ನೀರಿನ ವ್ಯವಸ್ಥೆಯೂ ಇಲ್ಲ. ಇದರಿಂದಾಗಿ ಅರಣ್ಯ ಇಲಾಖಾ ಕ್ಯಾಂಪ್‌ನಲ್ಲಿಯೇ ಇದ್ದುಕೊಂಡು ಮಣ್ಣಿಗೆ ಕನ್ನ ಹಾಕಿರುವದು ಮೇಲ್ನೋಟಕ್ಕೆ ಕಂಡುಬರುತ್ತದೆ..!

ಮೊಬೈಲ್ ಸ್ವಿಚ್ ಆಫ್..!

ಅಧಿಕಾರಿಗಳೊಂದಿಗೆ ಪಶ್ಚಿಮ ಘಟ್ಟ ಸಂರಕ್ಷಣೆ ಕಾರ್ಯಪಡೆ ಅಧ್ಯಕ್ಷರು ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭ ಅದುವರೆಗೆ ಕ್ಯಾಂಪ್‌ನಲ್ಲಿ ಕರ್ತವ್ಯದಲ್ಲಿದ್ದ ಅರಣ್ಯ ರಕ್ಷಕ ಸಚಿನ್ ಹಾಗೂ ವೀಕ್ಷಕ ಜಗದೀಶ್ ಸ್ಥಳದಲ್ಲಿರಲಿಲ್ಲ. ರಕ್ಷಕ ಮಲ್ಲಿಕಾರ್ಜುನ ಮಾತ್ರ ಹಾಜರಿದ್ದು, ತನಗೆ ಈ ಬಗ್ಗೆ ಏನೂ ತಿಳಿದಿಲ್ಲವೆಂದು ಹೇಳಿದರು. ಇತ್ತ ಸಚಿನ್ ಹಾಗೂ ಜಗದೀಶ್ ರಜೆಯನ್ನೂ ಹಾಕದೆ, ಯಾರಿಗೂ ಮಾಹಿತಿಯೂ ನೀಡದೆ ತಲೆಮರೆಸಿಕೊಂಡಿದ್ದರು. ಅವರ ಮೊಬೈಲ್‌ಗೆ ಕರೆ ಮಾಡಿದರೆ ಅದು ‘ಸ್ವಿಚ್ ಆಫ್’ ಆಗಿತ್ತು. ಇವರನ್ನು ಸರಿಯಾದ ರೀತಿಯಲ್ಲಿ ತನಿಖೆ ಮಾಡಿದರೆ ಸತ್ಯಾಂಶ ಹೊರಬರಬಹುದಲ್ಲವೇ..!? ಎಂಬದು ಗ್ರಾಮಸ್ಥರ ಪ್ರಶ್ನೆ...!?

? ಸಂತೋಷ್, ಸುನಿಲ್