ಮಡಿಕೇರಿ, ಜ. ೬: ತಾ. ೭ ರಿಂದ (ಇಂದಿನಿAದ) ರಾಜ್ಯಾದ್ಯಂತ ಬಿಗಿ ನಿಯಮಗಳು ಜಾರಿಯಾಗಲಿರುವ ಹಿನ್ನೆಲೆ ಸಾರಿಗೆ ಸಂಚಾರದಲ್ಲಿ ಕೆಲವು ಅಡೆತಡೆಗಳು ಉಂಟಾಗಬಹುದೆAದು ರಾಜ್ಯ ಸಾರಿಗೆ ಇಲಾಖೆ ಪ್ರಕಟಣೆ ತಿಳಿಸಿದ್ದು, ಸಾರ್ವಜನಿಕರ ಸಹಕಾರಕ್ಕೆ ಕೋರಿದೆ.

ವಾರಾಂತ್ಯದ ಕರ್ಫ್ಯೂ ದಿನಗಳಂದು ಜನದಟ್ಟಣೆಯನ್ನು ಗಮನದಲ್ಲಿರಿಸಿಕೊಂಡು ಅವಶ್ಯಕತೆಗೆ ಅನುಗುಣವಾಗಿ ಮಾತ್ರ ಸಾರಿಗೆಗಳ ಕಾರ್ಯಾಚರಣೆ ಮಾಡಲಾಗುತ್ತದೆ. ಸಾಧ್ಯವಾದಷ್ಟು ಮಟ್ಟಿಗೆ ರಾತ್ರಿ ಸಾರಿಗೆ ಸೇವೆಗಳನ್ನು ಆನ್‌ಲೈನ್ ಬುಕಿಂಗ್ ವ್ಯವಸ್ಥೆಯಲ್ಲಿ ಅಳವಡಿಸುವುದು. ರಾತ್ರಿ ಸಾರಿಗೆಗಳ ಮುಂಗಡ ಟಿಕೆಟ್ ಕಾಯ್ದಿರಿಸುವಿಕೆಯನ್ನು ಪರಿಶೀಲಿಸಿ ಅಗತ್ಯವಿದ್ದಲ್ಲಿ ಮಾತ್ರ ಸಾರಿಗೆಗಳನ್ನು ಕಾರ್ಯಾಚರಣೆ ಮಾಡುವುದು.

ಕೇರಳ, ಮಹಾರಾಷ್ಟç ಹಾಗೂ ಗೋವಾ ರಾಜ್ಯಗಳಿಂದ ಕರ್ನಾಟಕಕ್ಕೆ ಪ್ರಯಾಣಿಸುವ ಪ್ರಯಾಣಿಕರು (ಕೋವಿಡ್ -೧೯ ಲಸಿಕೆಯ ಡೋಸ್‌ಗಳನ್ನು ಪಡೆದಿದ್ದರೂ/ ಪಡೆಯದಿದ್ದರೂ ಸಹ) ೭೨ ಗಂಟೆಗಳ ಒಳಗೆ ಮಾಡಿಸಿರುವ ಆರ್‌ಟಿಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿ ಹೊಂದಿರುವುದು ಕಡ್ಡಾಯವಾಗಿರುತ್ತದೆ. ಈ ಬಗ್ಗೆ ಚಾಲನಾ ಸಿಬ್ಬಂದಿಗಳಿಗೆ ಸೂಕ್ತ ತಿಳುವಳಿಕೆ ನೀಡಬೇಕು ಎಂದು ಪ್ರಕಟಣೆ ತಿಳಿಸಿದೆ.