ವೀರಾಜಪೇಟೆ, ಜ. ೬: ಪ್ರಕೃತಿ ವಿಕೋಪದಲ್ಲಿ ನೆಲಸಮ ಆಗಿದ್ದ ತಡೆಗೋಡೆ ಪುನರ್ ನಿರ್ಮಾಣ ಕಾಮಗಾರಿಯನ್ನು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಪರಿಶೀಲಿಸಿ ಶೀಘ್ರ ಕಾಮಗಾರಿ ಪೂರ್ಣಗೊಳಿಸುವಂತೆ ಅಭಿಯಂತರ ಹೇಮಕುಮಾರ್ ಅವರಿಗೆ ಸೂಚನೆ ನೀಡಿದರು.
೨೦೧೯ ರಲ್ಲಿ ಸುರಿದ ಭಾರೀ ಮಳೆಗೆ ಪಟ್ಟಣದ ನೆಹರು ನಗರದಲ್ಲಿನ ತಡೆಗೋಡೆ ಸಂಪೂರ್ಣವಾಗಿ ಕುಸಿದು ಬಿದ್ದಿತ್ತು. ಇದರಿಂದ ಬೆಟ್ಟದ ಒಂದು ಪಾರ್ಶ್ವ ಕುಸಿಯುವ ಭೀತಿ ಎದುರಾದ ಕಾರಣ ಹಲವಾರು ಮನೆಗಳು ಕುಸಿಯುವ ಹಂತಕ್ಕೆ ಬಂದಿದ್ದವು. ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿತ್ತು. ಈ ಹಿನ್ನೆಲೆ ೫೬ ಲಕ್ಷ ರೂ.ಗಳಲ್ಲಿ ವೈಜ್ಞಾನಿಕವಾಗಿ ತಡೆಗೋಡೆ ನಿರ್ಮಿಸಲಾಗುತ್ತಿದ್ದು, ಕಾಮಗಾರಿ ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದೆ. ಮನೆಗಳು ಹಾಗೂ ಬೆಟ್ಟದ ಒಂದು ಭಾಗವೇ ಕುಸಿದು ಹೋಗುವ ಭೀತಿ ಇತ್ತು. ಈಗ ಆತಂಕ ದೂರವಾಗಿದೆ ಎಂದು ಸ್ಥಳಿಯರು ಶಾಸಕರಿಗೆ ತಿಳಿಸಿದರಲ್ಲದೆ ತಡೆಗೋಡೆ ಒಳ ಭಾಗಕ್ಕೆ ಶೀಘ್ರ ಮಣ್ಣು ತುಂಬಿಸಿ ಮನೆಗಳಿಗೆ ಭದ್ರತೆ ಒದಗಿಸಿ ಎಂದು ಶಾಸಕರನ್ನು ಮನವಿ ಮಾಡಿಕೊಂಡಿದ್ದರು. ತಡೆಗೋಡೆ ಕಾವiಗಾರಿಯನ್ನು ಪರಿಶೀಲನೆ ನಡೆಸಿದ ಶಾಸಕರು ಎತ್ತರ ಪ್ರದೇಶದಲ್ಲಿರುವ ಮನೆಗಳ ಭದ್ರತೆಗಾಗಿ ತಕ್ಷಣ ತಡೆಗೋಡೆಯ ಒಳ ಭಾಗದಲ್ಲಿ ಮಣ್ಣು ತುಂಬಿಸಲು ಅಭಿಯಂತರ ಹೇವiಕುಮಾರ್ ಅವರಿಗೆ ಸೂಚಿಸಿದರು.
ನೈರ್ಮಲ್ಯ ಹಾಗೂ ಒಳಚರಂಡಿ ಅಭಿವೃದ್ಧಿ ನಿಗಮದ ವತಿಯಿಂದ ಜೈನರ ಬೀದಿಯಲ್ಲಿ ರಾಜಕಾಲುವೆಗೆ ಬದಿಯ ತಡೆಗೋಡೆ ಕಾಮಗಾರಿಯನ್ನು ಶಾಸಕ ಬೋಪಯ್ಯ ಪರಿಶೀಲನೆ ನಡೆಸಿ ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದರು. ಈ ಭಾಗದಲ್ಲಿ ಅನುಪಯುಕ್ತವಾಗಿರುವ ಲೋಕೋಪಯೋಗಿ ಇಲಾಖೆಯ ಖಾಲಿ ಜಾಗವನ್ನು ಪಟ್ಟಣ ಪಂಚಾಯಿತಿಗೆ ಪಡೆಯಲು ಪ್ರಸ್ತಾವನೆ ಸಲ್ಲಿಸಲು ಮುಖ್ಯಾಧಿಕಾರಿ ಚಂದ್ರಕುಮಾರ್ಗೆ ನಿರ್ದೇಶನ ನೀಡಿದರು. ಈ ಸ್ಥಳದಲ್ಲಿ ಹಿರಿಯ ನಾಗರಿಕರಿಗೆ ಉದ್ಯಾವನ ನಿರ್ಮಿಸುವ ಇಂಗಿತ ವ್ಯಕ್ತಪಡಿಸಿದರು.
ಶಾಸಕರ ಭೇಟಿ ಸಂದರ್ಭ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಶ್ಮಿತಾ, ಮುಖ್ಯಾಧಿಕಾರಿ ಚಂದ್ರಕುಮಾರ್, ಅಭಿಯಂತರ ಹೇಮಕುಮಾರ್, ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷೆ ಜೂನ, ಸದಸ್ಯೆ ಮನೆಯಪಂಡ ದೇಚಮ್ಮ, ಸದಸ್ಯರಾದ ಮತೀನ್ ಜಲೀಲ್, ರಜನಿಕಾಂತ್, ಮಹಮದ್ ರಾಫಿ ಮತ್ತಿತರರು ಉಪಸ್ಥಿತರಿದ್ದರು.