ಮಡಿಕೇರಿ, ಜ. ೭ : ಮೂಡಬಿದಿರೆಯಲ್ಲಿ ನಡೆಯುತ್ತಿರುವ ೮೧ನೇ ಅಖಿಲಭಾರತ ಅಂತರ ವಿ.ವಿ. ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಮಂಗಳೂರು ವಿ.ವಿ.ಯನ್ನು ಪ್ರತಿನಿಧಿಸುತ್ತಿರುವ ಕೊಡಗಿನ ಯುವಕ ತೋರೆರ ದೇವಯ್ಯ ೮೦೦ ಮೀಟರ್ ಓಟದಲ್ಲಿ ಬೆಳ್ಳಿ ಹಾಗೂ ೪ಷ೪೦೦ ರಿಲೇಯಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಇವರು ಜಿಲ್ಲೆಯ ತೋರೆರ ಹರೀಶ್ ಹಾಗೂ ಸೀತಮ್ಮ ದಂಪತಿಯ ಪುತ್ರರಾಗಿದ್ದು ಆಳ್ವಾಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿ. ದೇವಯ್ಯ ಬೆಂಗಳೂರಿನಲ್ಲಿರುವ ಅಥ್ಲೇಟಿಕ್ ತರಬೇತುದಾರರಾದ ಬೊಳ್ಳಂಡ ಅಯ್ಯಪ್ಪ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.