ಕಣಿವೆ, ಜ. ೭: ಅಖಿಲ ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಒಕ್ಕೂಟದ ವಾರ್ಷಿಕ ಮಹಾಸಭೆ ಅಧ್ಯಕ್ಷ ಟಿ.ಬಿ. ಜಗದೀಶ್ ಅಧ್ಯಕ್ಷತೆಯಲ್ಲಿ ಕುಶಾಲನಗರ ಎ.ಪಿ.ಸಿ.ಎಂ.ಎಸ್. ಸಭಾಂಗಣದಲ್ಲಿ ಜರುಗಿತು.

ಜೀವವಿಮಾ ಪ್ರತಿನಿಧಿಗಳ ಒಕ್ಕೂಟದ ಮೈಸೂರು ವಿಭಾಗೀಯ ಅಧ್ಯಕ್ಷ ವಿ.ಜಿ. ಅಶೋಕ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ಸೋಮವಾರಪೇಟೆಯ ಹಿರಿಯ ಶಾಖಾಧಿಕಾರಿ ಪಿ. ಸತೀಶ್ ಕುಮಾರ್ ಪ್ರತಿನಿಧಿಗಳ ಸಭೆಯನ್ನು ಉದ್ಘಾಟಿಸಿದರು.

ಕುಶಾಲನಗರ ಶಾಖಾಧಿಕಾರಿ ಡಿ.ವಿ. ಸುಜಾತ ಪ್ರತಿನಿಧಿಗಳ ಕಾರ್ಯನಿರ್ವಹಣೆಯ ಕುರಿತು ಮಾಹಿತಿ ನೀಡಿದರು.

ಪ್ರತಿನಿಧಿಗಳ ಸಂಘದ ಮಹಿಳಾ ಅಧ್ಯಕ್ಷೆ ಬಿ.ಕೆ. ಸವಿತಾ, ದಕ್ಷಿಣವಲಯ ಉಪಾಧ್ಯಕ್ಷ ಸಿ. ಸ್ವಾಮಿಗೌಡ, ರಾಜಕೀಯ ವ್ಯವಹಾರಗಳ ಸಮಿತಿ ಅಧ್ಯಕ್ಷ ಎಂ. ರಾಜು, ಇಸಿ ಸದಸ್ಯ ಕೆ.ಆರ್. ಸುಬ್ರಮಣಿ, ಬಿ.ಆರ್. ಮಹೇಶ್, ಸೋಮವಾರಪೇಟೆ ತಾಲೂಕು ಪ್ರತಿನಿಧಿಗಳ ಒಕ್ಕೂಟದ ಉಪಾಧ್ಯಕ್ಷ ಬಿ.ಪಿ. ತಿಲಕಬಾಬು, ಪ್ರಧಾನ ಕಾರ್ಯದರ್ಶಿ ಎಸ್.ಎಸ್. ಚಂದ್ರಶೇಖರ್, ಖಜಾಂಚಿ ಕೆ.ಎಸ್. ಅಶೋಕ್, ಕೆ.ಸಿ. ಮೋಹನ್, ಹೇಮಾವತಿ ಮೊದಲಾದವರಿದ್ದರು. ಇದೇ ಸಂದರ್ಭ ಸಾಧಕ ಪ್ರತಿನಿಧಿಗಳನ್ನು ಗೌರವಿಸಲಾಯಿತು.