ಕೂಡಿಗೆ, ಜ. ೭: ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ೨೦೨೨-೨೩ನೇ ಸಾಲಿಗೆ ಕ್ರೀಡಾ ಶಾಲೆ ಮತ್ತು ಕ್ರೀಡಾ ನಿಲಯಗಳಿಗೆ ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕು ಮಟ್ಟದ ಪ್ರತಿಭಾನ್ವಿತ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ ಕೂಡಿಗೆಯ ಸರಕಾರಿ ಕ್ರೀಡಾ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ನಡೆಯಿತು.

ಆಯ್ಕೆ ಪ್ರಕ್ರಿಯೆಗೆ ಶಾಲಾ ಮುಖ್ಯೋಪಾಧ್ಯಾಯ ದೇವಕುಮಾರ್ ಚಾಲನೆ ನೀಡಿದರು. ತಾಲೂಕಿನ ೨೪೦ ವಿದ್ಯಾರ್ಥಿಗಳು ಭಾಗವಹಿಸಿ ದ್ದರು. ಹಾಕಿ, ವಾಲಿಬಾಲ್, ಫುಟ್ಬಾಲ್, ಅಥ್ಲೆಟಿಕ್ಸ್, ಬಾಸ್ಕೆಟ್‌ಬಾಲ್ ವಿಭಾಗಗಳಿಗೆ ಆಯ್ಕೆ ನಡೆಯಿತು. ಈ ಸಂದರ್ಭ ಅಥ್ಲೆಟಿಕ್ ತರಬೇತುದಾರ ಅಂತೋಣಿ ಡಿಸೋಜ, ಮಂಜುನಾಥ, ಹಾಕಿ ತರಬೇತಿದಾರ ವೆಂಕಟೇಶ, ರಮೇಶ್, ತಾಲೂಕು ದೈಹಿಕ ಅಧೀಕ್ಷಕ ಡಾ. ಸದಾಶಿವ ಎಸ್. ಪಲ್ಲೇದ್ ಹಾಜರಿದ್ದರು.