ಮಡಿಕೇರಿ, ಜ. ೬: ಮಡಿಕೇರಿಯ ಮಲ್ಲಿಕಾರ್ಜುನ ನಗರದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ಕೋದಂಡರಾಮ ದೇವಾಲಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ರೂ. ೨ ಲಕ್ಷ ಧನ ಸಹಾಯ ವಿತರಿಸಲಾಯಿತು.

ಈ ಸಂದರ್ಭ ಮಾತನಾಡಿದ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿಯ ಪ್ರಾದೇಶಿಕ ನಿರ್ದೇಶಕ ವಸಂತ್ ಸಾಲ್ಯಾನ್ ದೇವಸ್ಥಾನಕ್ಕೆ ಪ್ರಸಾದ ರೂಪದಲ್ಲಿ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸಹಾಯ ನೀಡುತ್ತಿದ್ದು, ಕಾಮಗಾರಿ ಸುಸಜ್ಜಿತವಾಗಿ ಆಗಲಿ ಎಂದು ಆಶಿಸಿದರು.

ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಯೋಗೀಶ್ ಎ., ಪ್ರಾದೇಶಿಕ ವಿಭಾಗದ ಜನಜಾಗೃತಿ ಯೋಜನಾಧಿಕಾರಿ ತಿಮ್ಮಯ್ಯ, ಮಡಿಕೇರಿ - ವೀರಾಜಪೇಟೆ ವಿಭಾಗದ ಯೋಜನಾಧಿಕಾರಿ ಪದ್ಮಯ್ಯ ಸಿ.ಹೆಚ್., ಮಡಿಕೇರಿ ವಿಭಾಗದ ಮೇಲ್ವಿಚಾರಕ ಹರೀಶ್ ಕೆ., ಸೇವಾಪ್ರತಿನಿಧಿ ಪ್ರೇಮ ಕೆ.ಪಿ. ಸೇರಿದಂತೆ ಕೋದಂಡರಾಮ ದೇವಾಲಯ ಟ್ರಸ್ಟ್ ಅಧ್ಯಕ್ಷ ಮಂಜುನಾಥ್, ಟ್ರಸ್ಟಿ ಸಂಪತ್‌ಕುಮಾರ್, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ನಂಜುAಡ, ಶ್ರೀ ರಾಮ ಸೇವಾ ಸಮಿತಿ ಅಧ್ಯಕ್ಷ ತಿಮ್ಮಯ್ಯ, ಉಪಾಧ್ಯಕ್ಷ ಪರಮೇಶ್, ಪ್ರಧಾನ ಕಾರ್ಯದರ್ಶಿ ವಿಶ್ವನಾಥ್, ಖಜಾಂಚಿ ಕಾಳಪ್ಪ ಹಾಗೂ ಪದಾಧಿಕಾರಿಗಳು ಹಾಜರಿದ್ದರು.