ಬೆಂಗಳೂರು: ೧೦ ಹೆಚ್. ಪಿ ವರೆಗಿನ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಒದಗಿಸುವ ಸಂಬAಧ ಕಾಫಿ ಮಂಡಳಿ ಪದಾಧಿಕಾರಿಗಳು ರಾಜ್ಯ ಇಂಧನ ಸಚಿವ ವಿ. ಸುನಿಲ್ ಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಕಾಫಿ ಮಂಡಳಿ ಅಧ್ಯಕ್ಷ ಎಂ. ಎಸ್ ಭೋಜೇಗೌಡ, ಉಪಾಧ್ಯಕ್ಷ ಮಹಾಬಲ, ಸದಸ್ಯರಾದ ಕೊಡಗು ಜಿಲ್ಲೆಯ ಡಾಲಿ ಚಂಗಪ್ಪ ಹಾಗೂ ಜಾನ್ ಥಾಮಸ್ ಅವರುಗಳು ಬೆಂಗಳೂರಿನಲ್ಲಿ ಸಚಿವರನ್ನು ಭೇಟಿ ಮಾಡಿದರು.
ಸಣ್ಣ ಹಾಗೂ ಮಧ್ಯಮ ಕಾಫಿ ಹಾಗೂ ಟೀ ಬೆಳೆಗಾರರು ಬಳಸುವ ೧೦ ಹೆಚ್. ಪಿ ವರೆಗಿನ ಪಂಪ್ ಸೆಟ್ ಗಳಿಗೆ ಉಚಿತವಾಗಿ ವಿದ್ಯುತ್ ನೀಡುವ ಸಲುವಾಗಿ ಸಂಬAಧಿಸಿದ ಮಾಹಿತಿ ಯನ್ನು ಈಗಾಗಲೇ ತೋಟಗಾರಿಕಾ ಇಲಾಖೆಗೆ ನೀಡಲಾಗಿದೆ. ಹಾಗೂ ವರದಿಯನ್ನು ಇಂಧನ ಇಲಾಖೆಗೂ ತಲುಪಿಸಲಾಗಿದ್ದು, ರಾಜ್ಯ ಹಣಕಾಸು ಇಲಾಖೆಯ ಗಮನಕ್ಕೂ ಬಂದಿದೆ. ಆದುದರಿಂದ ತ್ವರಿತವಾಗಿ ಈ ಯೋಜನೆ ಕಾರ್ಯರೂಪಕ್ಕೆ ಬರುವಂತೆ ಮಂಡಳಿ ಪದಾಧಿಕಾರಿ ಗಳು ಹಾಗೂ ಸದಸ್ಯರು ಸುನಿಲ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದು, ಈ ಬಗ್ಗೆ ಸಚಿವರು ಪೂರಕವಾಗಿ ಸ್ಪಂದಿಸಿದರು.