ಮಡಿಕೇರಿ, ಜ. ೬ : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಮಡಿಕೇರಿಯ ಬ್ಯಾರಿ ವೆಲ್ಫೇರ್ ಟ್ರಸ್ಟ್ ಸಹಕಾರದೊಂದಿಗೆ ಗೌರವ ಪ್ರಶಸ್ತಿ ಪ್ರದಾನ ಮತ್ತು ಪುರಸ್ಕಾರ ಸಮಾರಂಭ ತಾ. ೧೦ ರಂದು ಮಡಿಕೇರಿಯಲ್ಲಿ ನಡೆಯಲಿದೆ ಎಂದು ಅಕಾಡೆಮಿ ಅಧ್ಯಕ್ಷÀ ರಹೀಂ ಉಚ್ಚಿಲ್ ಹಾಗೂ ಟ್ರಸ್ಟ್ ಅಧ್ಯಕ್ಷ ಎಸ್.ಐ.ಮುನೀರ್ ಅಹ್ಮದ್ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ನಗರದ ಕಾವೇರಿ ಹಾಲ್ ನಲ್ಲಿ ಮಧ್ಯಾಹ್ನ ೨ ಗಂಟೆಯಿAದ ರಾತ್ರಿ ೯ ಗಂಟೆಯವರೆಗೆ ಕಾರ್ಯಕ್ರಮ ನಡೆಯಲಿದೆ.

ಆಶೀರ್ವಚನವನ್ನು ಸಯ್ಯದ್ ಹಸನ್ ಆಟಕೋಯ ತಂಙಳ್ ಅಸ್ಸಖಾಫ್ (ಆದೂರು ತಂಙಳ್) ನೀಡಲಿದ್ದು, ವಿಧಾನ ಪರಿಷತ್ ಸ್ಪೀಕರ್ ಬಸವರಾಜ್ ಹೊರಟ್ಟಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ಅಧ್ಯಕ್ಷತೆ ವಹಿಸಲಿದ್ದಾರೆ.

(ಮೊದಲ ಪುಟದಿಂದ)

ಪ್ರಶಸ್ತಿ ಪ್ರದಾನ

ಹರೇಕಳ ಹಾಜಬ್ಬ (ಬ್ಯಾರಿ ಭಾಷೆ ಮತ್ತು ಶಿಕ್ಷಣ ಕ್ಷೇತ್ರ), ಹುಸೈನ್ ಕಾಟಿಪಳ್ಳ (ಬ್ಯಾರಿ ಕಲೆ ಮತ್ತು ಸಾಹಿತ್ಯ), ಲಯನ್ ಡಾ.ಇ.ಕೆ.ಎ. ಸಿದ್ದೀಕ್ ಅಡ್ಡೂರ್ (ಬ್ಯಾರಿ ಸಂಸ್ಕೃತಿ ಮತ್ತು ಸಮಾಜ ಸೇವೆ) ಅವರುಗಳಿಗೆ ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್ ಕುಮಾರ್ ೨೦೨೧ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಗೌರವ ಪುರಸ್ಕಾರ

೨೦೨೧ನೇ ಸಾಲಿನ ಗೌರವ ಪುರಸ್ಕಾರಕ್ಕೆ ಆಯ್ಕೆಯಾದ ಅಶ್ರಫ್ ಅಪೋಲೋ (ಬ್ಯಾರಿ ಸಂಗೀತ), ಡಾ. ಕೆ.ಎ. ಮುನೀರ್ ಬಾವ (ಸಮಾಜ ಸೇವೆ), ಮರಿಯಮ್ ಫೌಝಿಯಾ ಬಿ.ಯಸ್ (ಮಹಿಳಾ ಸಾಧಕಿ), ಬ್ಯಾರಿ ಝುಲ್ಫಿ (ಯುವ ಪ್ರತಿಭೆ), ಮೊಹಮ್ಮದ್ ಬಶೀರ್ ಉಸ್ತಾದ್ (ಬ್ಯಾರಿ ದಫ್), ಮೊಹಮ್ಮದ್ ಫರಾಝ್ ಅಲಿ (ಬಾಲ ಪ್ರತಿಭೆ) ಇವರುಗಳನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪುರಸ್ಕರಿಸಲಿದ್ದಾರೆ.

ಸಾಧಕರಿಗೆ ಸನ್ಮಾನ

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸ್ಥಳೀಯ ೧೧ ಮಂದಿ ಸಾಧಕರಾದ ಉನೈಸ್ (ಸಮಾಜ ಸೇವೆ), ಬಿ.ಎ. ಷಂಶುದ್ದೀನ್ ಮಡಿಕೇರಿ (ಸಾಹಿತ್ಯ ಕ್ಷೇತ್ರ), ಎಂ.ಇ.ಮಹಮ್ಮದ್ ಮಡಿಕೇರಿ (ಪತ್ರಿಕೋದ್ಯಮ), ಜಂಶೀರ್ (ಸಮಾಜ ಸೇವೆ), ಎಸ್.ಎಮ್ ಶರೀಫ್ (ಕಲಾ ಕ್ಷೇತ್ರ), ಅಬ್ದುಲ್ ಜಲೀಲ್ ಮಡಿಕೇರಿ (ಸಮಾಜ ಸೇವೆ), ಮೊಹಮ್ಮದ್ ಚೆರ್ದು (ಸಮಾಜ ಸೇವೆ), ಸಲೀಂ ಅಲ್ತಾಫ್ ದುಬೈ (ಸಂಘಟಕರು), ಕಲೀಲ್ (ಸಮಾಜ ಸೇವೆ), ಡಾ. ರೆಮೀನಾ ಕೆ.ಹೆಚ್ (ವೈದ್ಯಕೀಯ), ಹಾರೀಸ್ (ಸಮಾಜ ಸೇವೆ), ಇವರುಗಳನ್ನು ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಹಾಗೂ ಮಡಿಕೇರಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಸನ್ಮಾನಿಸಲಿದ್ದಾರೆ.

ವಿಧಾನ ಪರಿಷತ್ ಸದಸ್ಯರಾದ ಸುಜಾಕುಶಾಲಪ್ಪ, ವೀಣಾಅಚ್ಚಯ್ಯ, ಮಡಿಕೇರಿ ನಗರಸಭೆ ಅಧ್ಯಕ್ಷ ನೆರವಂಡ ಅನಿತಾ ಪೂವಯ್ಯ, ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷÀ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಲಕ್ಷಿö್ಮÃನಾರಾಯಣ ಕಜೆಗದ್ದೆ, ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎಸ್.ರಂಗಪ್ಪ, ಮೈಸೂರು ವಿಭಾಗದ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ಮಡಿಕೇರಿ ಬ್ಯಾರಿ ವೆಲ್ಫೇರ್ ಟ್ರಸ್ಟ್ ಉಪಾಧ್ಯಕ್ಷ ಎಂ.ಬಿ.ನಾಸಿರ್ ಅಹ್ಮದ್, ಚಲನಚಿತ್ರ ನಟಿ ಹಾಗೂ ಯುವ ಜಾಗೃತಿ ಬಳಗದ ಅಧ್ಯಕ್ಷೆ ಕುಮಾರಿ ಪ್ರಾಚಿ ಗೌಡ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.