ಗೋಣಿಕೊಪ್ಪಲು, ಜ. ೬: ಗಡಿ ಭಾಗವಾದ ಕುಟ್ಟ ಗ್ರಾಮ ಪಂಚಾಯಿತಿಯಲ್ಲಿ ಬಿಲ್‌ಕಲೆಕ್ಟರ್ ಮಹೇಶ್ ಹಾಗೂ ಅಟೆಂಡರ್ ರಾಜನ್ ಇಬ್ಬರು ಸೇರಿ ಸಾರ್ವಜನಿಕರ ತೆರಿಗೆ ಹಣವನ್ನು ದುರುಪಯೋಗ ಪಡಿಸಿಕೊಂಡ ಪ್ರಕರಣಕ್ಕೆ ಸಂಬAಧಿಸಿದAತೆ ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ತನಿಖೆ ಮುಗಿಸಿ ತೆರಳುತ್ತಿದ್ದಂತೆಯೇ, ಇತ್ತ ಕುಟ್ಟ ಪೊಲೀಸ್ ಠಾಣೆಯ ಅಧಿಕಾರಿಗಳು ತಮ್ಮ ತನಿಖೆ ಆರಂಭಿಸಿದ್ದಾರೆ.

ಗ್ರಾಮ ಪಂಚಾಯಿತಿಗೆ ತೆರಳಿದ ಪೊಲೀಸರು ಸ್ಥಳ ಮಹಜರು ನಡೆಸಿದರು. ತೆರಿಗೆ ಹಣ ದುರುಪಯೋಗಕ್ಕೆ ಸಂಬAಧಿಸಿದ ಮೂಲ ಕಡತ, ರಶೀದಿಗಳನ್ನು ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅನಿಲ್ ಕುಮಾರ್ ಸ್ಥಳದಲ್ಲಿದ್ದು ಪೊಲೀಸರಿಗೆ ಅಗತ್ಯ ಮಾಹಿತಿ ಒದಗಿಸಿದರು. ಪೊಲೀಸರ ತನಿಖೆಗೆ ಸಂಬAಧಿಸಿದ ಕಡತಗಳನ್ನು ಮುಂದಿನ ದಿನಗಳಲ್ಲಿ ನೀಡುವುದಾಗಿ ತಿಳಿಸಿದರು.

ಸಂಪರ್ಕಕ್ಕೆ ಸಿಗದ ಆರೋಪಿಗಳು..!

ಪಂಚಾಯಿತಿ ಬಿಲ್‌ಕಲೆಕ್ಟರ್ ಮಹೇಶ್ ಹಾಗೂ ಅಟೆಂಡರ್ ರಾಜನ್ ತೆರಿಗೆ ಹಣ ದುರುಪಯೋಗದ ಬಗ್ಗೆ ಪೊಲೀಸ್ ದೂರು ದಾಖಲು ಆದ ನಂತರ ಇಬ್ಬರು ಯಾರ ಸಂಪರ್ಕಕ್ಕೆ ಸಿಗುತ್ತಿಲ್ಲ.ಅಲ್ಲದೆ ಅವರುಗಳು ಬಳಸುತ್ತಿದ್ದ ಮೊಬೈಲ್ ಕೂಡ ಸಂಪರ್ಕ ಕಡಿತಗೊಂಡಿದೆ. - ಹೆಚ್.ಕೆ. ಜಗದೀಶ್