ಮಡಿಕೇರಿ, ಜ. ೬: ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಆಗಂತುಕನೊಬ್ಬ ಎಸಿಬಿ ದಾಳಿ ಹೆಸರಿನಲ್ಲಿ ಒಂದು ಕೋಟಿ ರೂ. ಹಣದ ಬೇಡಿಕೆ ಇಟ್ಟ ಘಟನೆ ನಡೆದಿದ್ದು, ಈ ಸಂಬAಧ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನಿನ್ನೆ ಸಂಜೆ ೬.೧೫ರ ವೇಳೆಗೆ ಶಾಸಕ ಕೆ.ಜಿ. ಬೋಪಯ್ಯ ಅವರಿಗೆ ದೂರವಾಣಿ ಕರೆಯೊಂದು ಬಂದಿದ್ದು, ಕರೆ ಸ್ವೀಕರಿಸಿದಾಗ ಆಗಂತುಕನೊಬ್ಬ ತಾನು ಎಸಿಬಿ ಕಡೆಯವನಾಗಿದ್ದು, ನೀವು ಕೋಟ್ಯಂತರ ರೂ. ಸಂಪಾದನೆ ಮಾಡಿರುವುದಾಗಿ ನಿಮ್ಮವರೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ತಾ. ೬ರ ಬೆಳಿಗ್ಗೆ ನಿಮ್ಮ ಮನೆಯ ಮೇಲೆ ದಾಳಿ ನಡೆಯಲಿದ್ದು, ಸೆಟ್ಲ್ ಮಾಡಿಕೊಳ್ಳಿ ಎಂದು ಹೇಳಿದ ಎನ್ನಲಾಗಿದೆ. ಈ ವೇಳೆ ಏನು ಸೆಟ್ಲ್ಮೆಂಟ್ ಎಂದು ಬೋಪಯ್ಯ ಅವರು ಪ್ರಶ್ನಿಸಿದ್ದು, ಈ ವೇಳೆ ತಾನು ಕಳುಹಿಸುವ ಬ್ಯಾಂಕ್ ಖಾತೆ ಸಂಖ್ಯೆಯೊAದಕ್ಕೆ ಒಂದು ಕೋಟಿ ರೂ. ಹಣ ಹಾಕುವಂತೆ ಆಗಂತುಕ ಬೇಡಿಕೆಯಿಟ್ಟಿದ್ದಾನೆ. ಹಾಗಾದರೆ ನಾಳೆ ದಾಳಿ ಮಾಡಲಿ ಎಂದು ಬೋಪಯ್ಯ ಅವರು ಹೇಳಿದ್ದು, ಈ ಸಂದರ್ಭ ಮನೆಗೆ ಯಾರೋ ಬಂದ ಕಾರಣ ಬೋಪಯ್ಯ ಕರೆ ಕಡಿತಗೊಳಿಸಿದ್ದಾರೆ. ಬಳಿಕ ಮತ್ತೊಂದು ಮೊಬೈಲ್‌ನಿಂದ ಕರೆ ಬಂದಿದ್ದು, ಕರೆ ಸ್ವೀಕರಿಸಿದಾಗ ಏನು ತೀರ್ಮಾನ ಮಾಡಿದ್ರಿ ಎಂದು ಆಗಂತುಕ ಪ್ರಶ್ನಿಸಿದ್ದು, ಇದಕ್ಕೆ ಉತ್ತರಿಸುತ್ತ ದಾಳಿ ಮಾಡಲು ಹೇಳಿದ್ದೇನೆ ಅಲ್ವ ಮಾಡಲಿ ಎಂದು ಬೋಪಯ್ಯ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಕೆ.ಜಿ. ಬೋಪಯ್ಯ ಅವರು ಮಡಿಕೇರಿ ನಗರ ಠಾಣೆ ಸೇರಿದಂತೆ ಸೈಬರ್ ಕ್ರೆöÊಂಗೆ ದೂರು ನೀಡಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆ ವೇಳೆ ಆಂಧ್ರದಿAದ ಕರೆ ಬಂದಿರುವುದು ಖಚಿತಗೊಂಡಿದೆ. ಟ್ರೂಕಾಲರ್‌ನಲ್ಲಿ ಪರಿಶೀಲಿಸಿದಾಗ ಒಂದು ಸಂಖ್ಯೆ ಝಹೀದ್ ಖಾನ್, ಮತ್ತೊಂದು ಸಂಖ್ಯೆ ಅನ್ನದಾನಮ್ಮ ಎಂಬ ಹೆಸರಿನಲ್ಲಿರುವುದು ತಿಳಿದುಬಂದಿದೆ. ತನಿಖೆ ಮುಂದುವರೆದಿದೆ.