ಶನಿವಾರಸಂತೆ, ಜ. ೬: ಸಮೀಪದ ಹಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಂಡ್ಲಿ ಫೀಡರ್‌ಗೆ ಒಳಪಡುವ ಬೆಳ್ಳಾರಳ್ಳಿ ಗ್ರಾಮದಿಂದ ಹಂಡ್ಲಿ ಗ್ರಾಮದವರೆಗೆ ರಸ್ತೆ ಅಗಲೀಕರಣ ನಡೆಯುತ್ತಿರುವುದ ರಿಂದ ತಾ.೭ ಮತ್ತು ೮ರಂದು ರಸ್ತೆ ಬದಿಯ ಮರಗಳನ್ನು ಕಡಿಯುವ ಸಲುವಾಗಿ ತಂತಿಗಳನ್ನು ತೆರವುಗೊಳಿಸಿ ಕೊಡುವ ಕೆಲಸ ನಡೆಯಲಿದ್ದು, ವಿದ್ಯುತ್ ವ್ಯತ್ಯಯವಾಗಲಿದೆ.
ಆದ್ದರಿಂದ ತಾ. ೭ ಮತ್ತು ೮ ರಂದು ಬೆಳಿಗ್ಗೆ ೬ ಗಂಟೆಯಿAದ ಸಂಜೆ ೬ ಗಂಟೆಯವರೆಗೆ ಹಂಡ್ಲಿ ಫೀಡರ್ ವ್ಯಾಪ್ತಿಗೆ ಒಳಪಡುವ ಬೆಳ್ಳಾರಳ್ಳಿ, ಹಂಡ್ಲಿ, ತಾಳೂರು, ಮಣಗಲಿ, ಹೆಬ್ಬುಲುಸೆ, ಸಂಪಿಗೆದಾಳು, ಕಿತ್ತೂರು ಗ್ರಾಮಗಳಿಗೆ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ. ಗ್ರಾಮಸ್ಥರು ಸಹಕರಿಸಬೇಕು ಎಂದು ಸೆಸ್ಕ್ ಶಾಖಾ ಕಚೇರಿ ಕಿರಿಯ ಇಂಜಿನಿಯರ್ ಹೇಮಂತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.