ಗೋಣಿಕೊಪ್ಪ ವರದಿ, ಜ. ೫: ಟಿ. ಶೆಟ್ಟಿಗೇರಿ ಹೋಬಳಿ ಭಜರಂಗದಳ ಘಟಕದಿಂದ ಬಾಡಗರಕೇರಿ ಗ್ರಾಮದ ಕಾಯಪಂಡ ಅಜಿತ್ ಅವರು ಉದಾರವಾಗಿ ನೀಡಿದ ಗೋವುವನ್ನು ವೀರಾಜಪೇಟೆಯ ತೋರ ಗ್ರಾಮದ ಶ್ರೀ ಕಾವೇರಿ ಗೋ ಶಾಲೆಗೆ ಬಿಡಲಾಯಿತು.

ಈ ಸಂದರ್ಭ ಪೊನ್ನಂಪೇಟೆ ತಾಲೂಕು ಭಜರಂಗದಳ ಸಂಚಾಲಕ ಅಣ್ಣೀರ ಸಜನ್, ಟಿ.ಶೆಟ್ಟಿಗೇರಿ ಹೋಬಳಿ ಭಜರಂಗದಳ ಘಟಕದ ಸಂಚಾಲಕ ಮೀದೇರಿರ ಸಂತೋಷ್, ಟಿ.ಶೆಟ್ಟಿಗೇರಿ ಹೋಬಳಿ ಘಟಕ ಭಜರಂಗದಳ ಸಹ ಸಂಚಾಲಕ ಲಿಪ್ಪಿನ್ ಗೌಡ, ಟಿ.ಶೆಟ್ಟಿಗೇರಿ ಹೋಬಳಿ ಘಟಕ ಸುರಕ್ಷ ಪ್ರಮುಖ್ ಕಾಳಿದಾಸ್, ಕೊಡಗು ಜಿಲ್ಲಾ ವನವಾಸಿ ಕಲ್ಯಾಣ ಉಪಾಧ್ಯಕ್ಷ ಚೆಟ್ಟಂಗಡ ಮಹೇಶ್ ಮಂದಣ್ಣ, ವೀರಾಜಪೇಟೆ ತಾಲೂಕು ಧರ್ಮ ಜಾಗರಣ ತಾಲೂಕು ಸಂಯೋಜಕ್ ಕಟ್ಟೇರ ಚೋಟು ಬೋಪಣ್ಣ, ಉಪಸ್ಥಿತರಿದ್ದರು.