ಶನಿವಾರಸಂತೆ, ಜ. ೫: ಶನಿವಾರಸಂತೆ ಮಹಿಳಾ ಸಹಕಾರ ಸಂಘದ ೨೦೨೦-೨೧ನೇ ಸಾಲಿನ ೬೬ನೇ ವಾರ್ಷಿಕ ಮಹಾಸಭೆ ಇತ್ತೀಚೆಗೆ ಮಹಿಳಾ ಸಹಕಾರ ಸಂಘದ ಕಟ್ಟಡದಲ್ಲಿ ನಡೆಸಲಾಯಿತು. ಸಂಘದ ಅಧ್ಯಕ್ಷೆ ಭುವನೇಶ್ವರಿ ಹರೀಶ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಸಂಘದ ಗೌರವ ಕಾರ್ಯದರ್ಶಿ ಗೀತಾ ಹರೀಶ್ ಸಭೆ ಕುರಿತು ಮಾಹಿತಿ ನೀಡಿದರು. ಸಂಘದ ಉಪಾಧ್ಯಕ್ಷ ರೇಖಾ ಸೋಮಶೇಖರ್ ಕಳೆದ ಮಹಾಸಭೆಯ ನಡಾವಳಿಗಳನ್ನು ಸಭೆಗೆ ಮಂಡಿಸಿದರು. ನಿರ್ದೇಶಕಿ ಉಷಾ ಜಯೇಶ್ ೨೦೨೦-೨೧ನೇ ಸಾಲಿನ ಆಡಳಿತ ಮಂಡಳಿಯ ವರದಿಯನ್ನು ಮಂಡಿಸಿದರು.
ನಿರ್ದೇಶಕಿ ಶಿಲ್ಪ ಶರತ್ ಶೇಖರ್ ೨೦೨೦-೨೧ನೇ ಸಾಲಿನ ಲೆಕ್ಕ ಪರಿಶೋಧನಾ ವರದಿ ಮಂಡಿಸಿದರು. ನಿರ್ದೇಶಕಿ ಹೆಚ್.ಎಸ್. ಸೌಭಾಗ್ಯಲಕ್ಷಿö್ಮ ೨೦೨೧-೨೨ನೇ ಸಾಲಿನ ಆಯವ್ಯಯದ ಬಗ್ಗೆ ತಿಳಿಹೇಳಿದರು. ಸಭೆಯನ್ನು ರಂಜಿಸಿದ ಛದ್ಮವೇಶದಾರಿ ಸದಸ್ಯಣಿಯರಿಗೆ ಬಹುಮಾನ ವಿತರಿಸಲಾಯಿತು. ನಿರ್ದೇಶಕಿ ಶೀಲಾ ಕುಶಾಲಪ್ಪ ಪ್ರಾರ್ಥನೆಯೊಂದಿಗೆ, ನಿರ್ದೇಶಕಿ ವಾಣಿ ಹೇಮಂತ್ ಸ್ವಾಗತಿಸಿದರು. ನಿರ್ದೇಶಕಿ ಅನಿತಾ ಶೇಖರ್ ವಂದಿಸಿದರು. ಸಭೆಯಲ್ಲಿ ನಿರ್ದೇಶಕರುಗಳಾದ ಸ್ವಾತಿ ಹರೀಶ್, ಶೋಭಾ ಶಾಂತರಾಜ್, ಸುಮಿತ್ರ, ಬಸವರಾಜ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.