ನಾಪೋಕ್ಲು, ಜ. ೪: ನಗರದ ಕೇಂದ್ರ ಬಿಂದುವಿನಲ್ಲಿದ್ದ ಶತಮಾನದ ನಂ:೨೭೪ ನಾಪೋಕ್ಲು ನಾಡು ಗ್ರಾಹಕರ ಸಹಕಾರ ಸಂಘದ (ಸ್ಟೋರ್) ಕಟ್ಟಡವನ್ನು ಕೆಡವಲಾಗಿದ್ದು, ನೂತನ ಕಟ್ಟಡ ನಿರ್ಮಿಸಲು ಸಿದ್ಧತೆ ಮಾಡಲಾಗಿದೆ. ಸುಮಾರು ೧೦೦ಕ್ಕೂ ಅಧಿಕ ವರ್ಷಗಳ ಹಿಂದೆ ನಾಪೋಕ್ಲು ಹೋಬಳಿಯ ಸುಮಾರು ೨೭ ಗ್ರಾಮಗಳ ಜನರಿಗೆ ಅನುಕೂಲ ವಾಗುವಂತೆ ನಾಪೋಕ್ಲು ನಗರದಲ್ಲಿ ಗ್ರಾಹಕರ ಸಹಕಾರ ಸ್ಟೋರನ್ನು ಪ್ರಾರಂಭಿಸಲಾಯಿತು. ಅಂದಿನಿAದ ಇಲ್ಲಿಯವರೆಗೆ ಜನರಿಗೆ ಅನುಕೂಲವಾಗುವಂತೆ ದಿನಸಿ, ಪಾತ್ರೆಯ, ಬಟ್ಟೆ ಅಂಗಡಿಯನ್ನು ನಡೆಸುತ್ತಾ ಬಂದಿರುವ ಈ ಸ್ಟೋರ್ ಇಂದು ನ್ಯಾಯ ಬೆಲೆ ಅಂಗಡಿಯನ್ನು ಹೊಂದಿರುತ್ತದೆ. ಕಳೆದ ೧೦ ವರ್ಷಗಳ ಹಿಂದೆ ಈ ಗ್ರಾಹಕರ ಸ್ಟೋರ್ ಮುಚ್ಚುವ ಹಂತಕ್ಕೆ ಬಂದಿತ್ತು. ಆದರೆ ನೂತನ ಆಡಳಿತ ಮಂಡಳಿಯವರ ಕಾರ್ಯದಕ್ಷತೆಯಿಂದ ಇಂದು ಸ್ಟೋರ್ ಅಭಿವೃದ್ಧಿಯನ್ನು ಸಾಧಿಸಿದೆ. ಇದರಿಂದ ಇಂದು ನೂತನ ಕಟ್ಟಡ ನಿರ್ಮಿಸಲು ಸಾಧ್ಯವಾಗಿದೆ. ಸಂಘದ ಈಗಿನ ಅಧ್ಯಕ್ಷ ಪಟ್ರಪಂಡ ಮೋಹನ್ ಮುದ್ದಪ್ಪನವರ ತಂಡ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಇವರೊಂದಿಗೆ ಉಪಾಧ್ಯಕ್ಷೆ ನಾಟೋಳಂಡ ಕಸ್ತೂರಿ ಉತ್ತಪ್ಪ, ನಿರ್ದೇಶಕರಾದ ಕುಲ್ಲೇಟಿರ ಅರುಣ ಬೇಬ, ಪಾಡಿಯಮ್ಮಂಡ ಮನು ಮಹೇಶ್, ಕೊಂಬAಡ ಗಣೇಶ್, ಎಚ್.ಎ. ಬೊಳ್ಳು, ಬೊಟ್ಟೋಳಂಡ ಕುಟ್ಟಪ್ಪ, ನಾಯಕಂಡ ಮುತ್ತಪ್ಪ, ಕೇಟೋಳಿರ ಮುತ್ತಮ್ಮ, ಬಿ.ಆರ್. ರಾಮಣ್ಣ ಮತ್ತು ವ್ಯವಸ್ಥಾಪಕ ಕಲ್ಲೇಂಗಡ ತಮ್ಮಿ ತಿಮ್ಮಯ್ಯ ಮತ್ತು ಸಿಬ್ಬಂದಿಗಳಾದ ಮುತ್ತಪ್ಪ, ರಾಜ ಇವರ ಕಾರ್ಯದಕ್ಷತೆಯಿಂದ ಸಂಘವು ಅಭಿವೃದ್ಧಿಯತ್ತ ಮುನ್ನಡೆದಿದೆ. - ದುಗ್ಗಳ ಸದಾನಂದ.