ಮಡಿಕೇರಿ, ಜ. ೪: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪುತ್ತೂರು ವಿಭಾಗದಿಂದ ೨೦೨೧ನೇ ಸಾಲಿನಲ್ಲಿ ವಿತರಿಸಿರುವ ವಿಶೇಷ ಚೇತನರ ಬಸ್ ಪಾಸುಗಳನ್ನು ಫೆ. ೨೮ರವರೆಗೆ ಮಾನ್ಯ ಮಾಡಲಾಗಿದೆ. ೨೦೨೨ನೇ ಸಾಲಿನ ಬಸ್ ಪಾಸ್‌ಗಳನ್ನು ಜ.೧೭ರಿಂದ ವಿತರಿಸಲು / ನವೀಕರಿಸಲು ಕ್ರಮವಹಿಸಲಾಗುವುದು.
ಪ್ರಸ್ತುತ ಸಾಲಿನಲ್ಲಿ ವಿಶೇಷಚೇತನರ ಪಾಸ್‌ದಾರರ ನವೀಕರಣ / ಹೊಸ ಪಾಸ್ ಪಡೆಯುವ ಫಲಾನುಭವಿಗಳೆಲ್ಲರೂ ಅರ್ಜಿಯನ್ನು ಸೇವಾಸಿಂಧು ಪೋರ್ಟಲ್ ಮುಖಾಂತರವೇ ಸಲ್ಲಿಸುವುದು ಕಡ್ಡಾಯವಾಗಿದೆ. ಸೇವಾಸಿಂಧು ಪೋರ್ಟಲ್ (hಣಣಠಿs://seಡಿviಛಿeoಟಿಟiಟಿe.gov.iಟಿ/ಞಚಿಡಿಟಿಚಿಣಚಿಞಚಿ/) ನಲ್ಲಿ ಅರ್ಜಿಯನ್ನು ಸಲ್ಲಿಸುವಾಗ ವಿಶೇಷಚೇತನರು ವಾಸ್ತವ್ಯದ ದೃಢೀಕರಣ, ಆಧಾರ್ ಕಾರ್ಡ್ ಪ್ರತಿ, ಪಾಸ್‌ಪೋರ್ಟ್ ಸೈಜಿನ ಫೋಟೋ ಹಾಗೂ ಯುಡಿಐಡಿ/ ಗುರುತಿನ ಚೀಟಿಯನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುವುದು ಹಾಗೂ ಆಯಾ ತಾಲೂಕಿನ ಘಟಕದಲ್ಲಿ ಪಾಸುಗಳನ್ನು ಪಡೆಯುವುದು. ಹೊಸದಾಗಿ ಪಾಸ್ ಪಡೆಯುವವರು ವಿಭಾಗೀಯ ಕಚೇರಿ ಪುತ್ತೂರುವಿನಲ್ಲಿ ಪಡೆಯಬೇಕು. ಪಾಸು ಪಡೆಯುವ ಸಮಯದಲ್ಲಿ ಸಲ್ಲಿಸಿದ ಅರ್ಜಿಯ ಪ್ರತಿ, ವಾಸ್ತವ್ಯದ ದೃಢೀಕರಣ, ಆಧಾರ್ ಕಾರ್ಡ್ ಪ್ರತಿ, ಪಾಸ್‌ಪೋರ್ಟ್ ಸೈಜಿನ ೨ ಫೋಟೋ, ಅಂಚೆ ಚೀಟಿ ಗಾತ್ರದ ೧ ಫೋಟೋ ಹಾಗೂ ಯುಡಿಐಡಿ / ಗುರುತಿನ ಚೀಟಿಯ ಮಾನ್ಯತಾ ಅವಧಿಯನ್ನು ಪರಿಶೀಲನೆ ಮಾಡುವ ಸಲುವಾಗಿ ಪರಿಶೀಲನೆಗಾಗಿ ತೋರಿಸತಕ್ಕದ್ದು ಹಾಗೂ ಶುಲ್ಕ ಪಾವತಿ ಮಾಡಿ ಪಾಸನ್ನು ದಿ.೨೮.೨.೨೦೨೨ರೊಳಗೆ ಪಡೆಯಬೇಕು ಎಂದು ಕ.ರಾ.ರ.ಸಾ.ನಿ. ವಿಭಾಗೀಯ ನಿಯಂತ್ರಣಾಧಿಕಾರಿ (ಪುತ್ತೂರು) ತಿಳಿಸಿದ್ದಾರೆ.