ಭಾಗಮಂಡಲ, ಜ. ೫: ತಾವೂರು ಗ್ರಾಮದ ಶ್ರೀಮಹಿಷಾಸುರ ಮರ್ಧಿನಿ ದೇವಸ್ಥಾನದ ಸಭಾಂಗಣದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಗ್ರಾಮಸ್ಥರ ವತಿಯಿಂದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ನಿಧನರಾದ ಸಿಡಿಎಸ್ ಜನರಲ್ ಬಿಪಿನ್ ರಾವತ್ ಹಾಗೂ ಇತರ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಶ್ರದ್ಧಾಂಜಲಿ ಸಭೆಯ ಅಧ್ಯಕ್ಷತೆಯನ್ನು ದೇವಸ್ಥಾನದ ಅಧ್ಯಕ್ಷ ಹೊಸಗದ್ದೆ ಎ. ಭಾಸ್ಕರ ವಹಿಸಿದ್ದರು. ಶಾಸಕ ಕೆ.ಜಿ. ಬೋಪಯ್ಯ ಪಂಚಾಯಿತಿ ಉಪಾಧ್ಯಕ್ಷ ಹೊಸೂರು ಜೆ. ಸತೀಶ್‌ಕುಮಾರ್, ಡಾ. ಕೋಳಿಬೈಲ್ ಕುಶ್ವಂತ್, ರಾಷ್ಟಿçÃಯ ಸ್ವಯಂ ಸೇವಾ ಸಂಘದ ಹಿರಿಯ ಪದಾಧಿಕಾರಿ ಸಿ.ಎನ್.ಸೋಮೇಶ್, ಅಮೆ ಬಿ. ಬಾಲಕೃಷ್ಣ, ರವೀಂದ್ರಕುಮಾರ್ ಹೆಬ್ಬಾರ್, ಪಿ.ಎಂ. ರಾಜೀವ, ಸುನಿಲ್ ಪತ್ರಾವೊ, ಜಿ.ಜಿ ಯದುಕುಮಾರ್, ಅರ್ಚಕ ಶಾಂಭಟ್, ತಕ್ಕರಾದ ಕುರುಂಜಿ ಸಿ. ದೇವಯ್ಯ ಹಾಗೂ ದೇವಾಲಯದ ಆಡಳಿತ ಮಂಡಳಿ ಸದಸ್ಯರು ಹಾಜರಿದ್ದರು.