ಶನಿವಾರಸಂತೆ, ಜ. ೪: ಪಟ್ಟಣದಲ್ಲಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮಾರ್ಷಲ್ ಆರ್ಟ್ಸ್ ಮತ್ತು ಯೋಗ ಸಂಸ್ಥೆ ವತಿಯಿಂದ ನಡೆದ ೩ನೇ ಡಿಗ್ರಿ ಬ್ಲಾö್ಯಕ್‌ಬೆಲ್ಟ್ ಪರೀಕ್ಷೆಯಲ್ಲಿ ವಿವಿಧೆಡೆಯ ಕರಾಟೆ ಪಟುಗಳು ಭಾಗವಹಿಸಿದ್ದರು.
ಶನಿವಾರಸಂತೆಯ ಸಂಜಯ್, ವಿನಯ್, ಗೌಡಳ್ಳಿಯ ಗಣೇಶ್, ಕೂಡಿಗೆಯ ಪ್ರಮೋದ್, ಪಿರಿಯಾಪಟ್ಟಣದ ಕೃಷ್ಣ ಹಾಗೂ ಮಡಿಕೇರಿಯ ಸಲಾವುದ್ದೀನ್ ಭಾಗವಹಿಸಿ ೩ನೇ ಡಿಗ್ರಿ ಬ್ಲಾö್ಯಕ್‌ಬೆಲ್ಟ್ ಪಡೆದುಕೊಂಡು. ಪರೀಕ್ಷಕರಾಗಿ ಹಿರಿಯ ತರಬೇತುದಾರ ಅರುಣ್, ತರಬೇತುದಾರರಾದ ಪಳನಿ, ಚಂದ್ರು ಕಾರ್ಯನಿರ್ವಹಿಸಿದರು.