ಮಡಿಕೇರಿ, ಜ. ೪: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು ಮರಂದೋಡದ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಸಿದ ಬಾಳೋಪಾಟ್ ಪೈಪೋಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜೇತರಾದವರ ಪಟ್ಟಿ ಪ್ರಕಟಿಸಲಾಗಿದೆ. ಮಕ್ಕಳ ವಿಭಾಗದಲ್ಲಿ ದಿಲನ್ ತಿಮ್ಮಯ್ಯ ಮತ್ತು ತಂಡ (ಪ್ರಥಮ), ಪಿಯುಸಿ ಮೇಲ್ಪಟ್ಟು ಮತ್ತು ಸಾರ್ವಜನಿಕ ವಿಭಾಗದಲ್ಲಿ ಕೊಡವ ಸಮಾಜ ಕಲ್ಚರ್ ಅಂಡ್ ಸ್ಪೋಟ್ಸ್ ಕ್ಲಬ್, ಮೈಸೂರು (ಪ್ರಥಮ), ರಮೇಶ್ ಮತ್ತು ತಂಡ ಗಾಳಿಬೀಡು (ದ್ವಿತೀಯ), ಸಿ.ಕೆ. ರಮೇಶ್ ಮತ್ತು ತಂಡ ಮರಂದೋಡ (ತೃತೀಯ), ಕೆ.ಕೆ. ಪೊನ್ನಪ್ಪ ಮತ್ತು ತಂಡ ಕಕ್ಕಬ್ಬೆ (ಸಮದಾನಕರ ಬಹುಮಾನ), ಪೊನ್ನೋಳತಂಡ ಅರುಣ್ ತಿಮ್ಮಯ್ಯ ಮತ್ತು ತಂಡ ನಾಲಡಿ, ಕಕ್ಕಬ್ಬೆ (ಸಮದಾನಕರ ಬಹುಮಾನ) ಪಡೆದಿದ್ದಾರೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ತಿಳಿಸಿದ್ದಾರೆ.