ಚೆಯ್ಯಂಡಾಣೆ, ಜ. ೪: ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಖ್ಯಾತಿ ಪಡೆದ ಬಾಲಕ ಮಿಥುನ್ ಮುದ್ದಯ್ಯಗೆ ಮಾರ್ಚಂಡ ಕುಟುಂಬಸ್ಥರ ವತಿಯಿಂದ ಐನ್ ಮನೆಯಲ್ಲಿ ಸನ್ಮಾನ ನಡೆಯಿತು.

ಈ ಸಂದರ್ಭ ಕುಟುಂಬದ ಪಟ್ಟೆದಾರ ಬೋಪಯ್ಯ, ದೇವತಕ್ಕ ಅಯ್ಯಪ್ಪ,ಅಧ್ಯಕ್ಷರಾದ ಬಾಬಿ ತಿಮ್ಮಯ್ಯ, ಕಾರ್ಯದರ್ಶಿ ದಿಲನ್ ದೇವಯ್ಯ, ಕೋಶಾಧಿಕಾರಿ ಗಿರಿ ಸುಬ್ಬಯ್ಯ, ಗಣೇಶ್ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.